ಕುಶಾಲನಗರ;ಬೆಂಕಿಗೆ ಆಹುತಿಯಾದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ಕಾರು

Feb 8, 2026 - 09:02
 0  2.1k
ಕುಶಾಲನಗರ;ಬೆಂಕಿಗೆ ಆಹುತಿಯಾದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ಕಾರು

ಕುಶಾಲನಗರ, ಫೆ 08: ಚಲಿಸುತ್ತಿದ್ದ ಕಾರೊಂದು ಹೆದ್ದಾರಿಯಲ್ಲಿ ಬೆಂಕಿಗೆ ಆಹುತಿಯಾದ ಘಟನೆ ಆನೆಕಾಡು ಬಳಿ ಶನಿವಾರ ರಾತ್ರಿ ನಡೆದಿತ್ತು. ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್‌ ಅವರು ಉಡುಪಿಯಿಂದ ಮೈಸೂರಿಗೆ ತೆರಳುವಾಗ ಈ ಘಟನೆ ಸಂಭವಿಸಿದೆ. 

ಅಪಾಯ ಅರಿತ ಕಾರ್ ಡ್ರೈವರ್ ಸೂಚನೆಯಂತೆ ಮಜೀದ್ ಅವರು ಕಾರಿನಿಂದ ಕೆಳಗಿಳಿದಿದ್ದಾರೆ. ಹುಂಡೈ ಕ್ರೆಟಾ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಕುಶಾಲನಗರ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 0