ಕುಶಾಲನಗರ:,ಬೀದಿ ನಾಯಿಗಳ ದಾಳಿಗೆ ಎರಡು ಆಡು ಬಲಿ

Dec 21, 2025 - 15:46
Dec 21, 2025 - 19:43
 0  608
ಕುಶಾಲನಗರ:,ಬೀದಿ ನಾಯಿಗಳ ದಾಳಿಗೆ ಎರಡು ಆಡು ಬಲಿ

ಕುಶಾಲನಗರ,ಡಿ೨೦: ಕುಶಾಲನಗರ ಪುರಸಭೆ ವ್ಯಾಪ್ತಿಯ ಚೌಡೇಶ್ವರಿ ಬಡಾವಣೆಯಲ್ಲಿ ಬೀದಿನಾಯಿಗಳ ದಾಳಿಯಿಂದಾಗಿ ಎರಡು ಆಡು ಬಲಿಯಾದ ಘಟನೆ ನಡೆದಿದೆ. ಕೂಡುಮಂಗಳೂರು ಗ್ರಾ.ಪಂ ನ ಅಮರನಾಥ್ ಬಡಾವಣೆಯ ನಿವಾಸಿ ಪುಟ್ಟರಾಜು ಅವರ ಎರಡು ಆಡು ಬೀದಿನಾಯಿಗಳ ದಾಳಿಗೆ ಬಲಿಯಾಗಿದೆ.

ಆಡು ಮೇಯುತ್ತಿದ್ದ ವೇಳೆ ನಾಲ್ಕೈದು ಬೀದಿನಾಯಿಗಳು ಒಂದೇ ಸಮನೇ ದಾಳಿ ನಡೆಸಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಂತರ ಸ್ಥಳದಲ್ಲಿದ್ದವರು ಆಡುಗಳನ್ನು ರಕ್ಷಿಸಲು ಮುಂದಾಗಿದ್ದು, ಪ್ರಯತ್ನ ವಿಫಲವಾಗಿದೆ. ಸ್ಥಳಕ್ಕೆ ಕುಶಾಲನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪುರಸಭೆ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0