ಕುಶಾಲನಗರ:ಮಳೆಗೆ ಟೌನ್ ಕಾಲೋನಿಯಲ್ಲಿ ಮನೆ ಕುಸಿತ ಹೊಸ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ ಶಾಸಕ ಮಂತರ್ ಗೌಡ
ಕುಶಾಲನಗರ:ಇತ್ತೀಚೆಗೆ ಸುರಿದ ಭಾರಿ ಮಳೆಗೆ ಟೌನ್ ಕಾಲೋನಿಯ ಬಡ ಕುಟುಂಬವೊಂದರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಂತರ್ ಗೌಡ ಅವರು ಕುಟುಂಬದವರಿಗೆ ಸಾಂತ್ವನ ಹೇಳಿ, ಹೊಸ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು. ತಾತ್ಕಾಲಿಕ ವ್ಯವಸ್ಥೆಗಾಗಿ ತಮ್ಮ ಸ್ವಂತ ಹಣದಿಂದ ಬಾಡಿಗೆ ಮನೆಯ ವ್ಯವಸ್ಥೆ ಕೂಡ ಮಾಡಿಕೊಡುವುದಾಗಿ ಶಾಸಕರು ಘೋಷಿಸಿದರು. ಸರ್ಕಾರದಿಂದ ಸಿಗುವ ನೆರವಿನ ಜೊತೆಗೆ ಕುಟುಂಬಕ್ಕೆ ತಕ್ಷಣದ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಮಳೆ ಹಾನಿಗೊಳಗಾದ ಇತರೆ ಕುಟುಂಬಗಳಿಗೂ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕುಶಾಲನಗರ ತಾಲೂಕು ದಂಡಾಧಿಕಾರಿ ಕೃಷ್ಣಮೂರ್ತಿ. ಪುರಸಭೆ ಮುಖ್ಯ ಅಧಿಕಾರಿ ಗಿರೀಶ್. ಸಂತೋಷ್. ರಾಮು ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ. ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡರಾವ್. ಮಾಜಿ ಪುರಸಭೆ ಸದಸ್ಯ ಶಿವಶಂಕರ್ ಕಿರಣ್ ಪ್ರಕಾಶ್ ಹೆಬ್ಬಾಲೆ ರಂಜಾನ್ ಮತ್ತಿತರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
