ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಿತ್ ನೇತೃತ್ವದಲ್ಲಿ, ಶಾಸಕರಾದ ಡಾ.ಮಂತರ್ ಗೌಡ ರವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪೆಯಾದ ಯುವಕರು

Jan 2, 2026 - 09:32
Jan 2, 2026 - 14:29
 0  1.1k
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಿತ್ ನೇತೃತ್ವದಲ್ಲಿ, ಶಾಸಕರಾದ  ಡಾ.ಮಂತರ್ ಗೌಡ ರವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪೆಯಾದ ಯುವಕರು

ಸೋಮವಾರಪೇಟೆ:ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬಿಜೆಪಿ ಪಕ್ಷದ ಹಲವು ಮಂದಿ ಕಾರ್ಯಕರ್ತರು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಿತ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಈ ಸಂದರ್ಭದಲ್ಲಿ ಬಿಜೆಪಿ ಯುವ ಪಡೆಯನ್ನು ಸ್ವಾಗತಿಸಿ ಕಾಂಗ್ರೆಸ್ ಪಕ್ಷದ ಶಾಲು ಗಳನ್ನು ಹಾಕಿ ಶಾಸಕರಾದ ಡಾ.ಮಂತರ್ ಗೌಡ ರವರು ಪಕ್ಷಕ್ಕೆ ಬರಮಾಡಿಕೊಂಡು ಶುಭ ಹಾರೈಸಿದರು. 

ಪ್ರಮುಖವಾಗಿ ಬಿಜೆಪಿ ಯುವ ಮೋರ್ಚಾ ಮುಖಂಡರಾದ ಚಿರಂತ್ ಮಸಗೋಡು, ಯೋಗೇಶ್ ಬೇಳೂರು, ಕಿರಣ್ ಗಾಂಧಿನಗರ, ಅಭಿಷೇಕ್ ಎಂಡಿ ಬ್ಲಾಕ್, ವಿನಯ್ ಕುಸುಬೂರು, ಆಕಾಶ್ ಜನತಾ ಕಾಲೋನಿ, ವಿಕಾಸ್ ಸೋಮವಾರಪೇಟೆ, ತರು ಹಾನಗಲ್ ಶೆಟ್ಟಳ್ಳಿ, ರುತ್ವಿಕ್, ಹೇಮಂತ್ ತೋಳೂರುಶೆಟ್ಟಳ್ಳಿ, ಮಂಜುನಾಥ ಬಾಣಾವಾರ, ಹೇಮಂತ್ ಮಸಗೋಡು ಹಾಗೂ ಇತರರು ಕಾಂಗ್ರೆಸ್ ಸೇರ್ಪಡೆಗೊಂಡರು. 

ಈ ಸಂದರ್ಭದಲ್ಲಿ ಮಾತನಾಡಿದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಿತ್ ಈಗಾಗಲೇ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಶಾಸಕರ ಅಭಿವೃದ್ಧಿ ಚಿಂತನೆಗಳೊಂದಿಗೆ ಕೈಜೋಡಿಸಲು ದೊಡ್ಡ ಯುವ ಸಮೂಹ ಕಾಂಗ್ರೆಸ್ ಪಕ್ಷದ ಕಡೆಗೆ ವಾಲುತ್ತಿದೆ . ಬಿಜೆಪಿ ಪಕ್ಷದ ಪ್ರಮುಖ ಯುವ ನಾಯಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಅನ್ಯ ಪಕ್ಷಗಳ ಪ್ರಮುಖರು ಕಾರ್ಯಕರ್ತರು ಸೇರ್ಪಡೆಯಾಗಲಿದ್ದು ದೊಡ್ಡ ಮಟ್ಟದ ಬದಲಾವಣೆಯಾಗಲಿದೆ.

ಇಂದಿನ ಸೇರ್ಪಡೆ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸಲು ದೊಡ್ಡ ಶಕ್ತಿಯಾಗಿದೆ ಎಂದು ತಿಳಿಸಿದರು. 

ಈ ಸಂದರ್ಭ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿ ಎ ಲಾರೆನ್ಸ್, ಸೋಮವಾರಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿರಣ್ ಡಿ ಯು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 1