ಲವ್ ಸೆಕ್ಸ್ ದೋಖಾ | ಅತ್ಯಾಚಾರ ಆರೋಪಿಸಿದ 'ಮ್ಯಾಟ್ರಿಮೋನಿ' ಗರ್ಲ್ ಫ್ರೆಂಡ್; 29 ವರ್ಷದ ಇಂಜಿನಿಯರ್ ಆತ್ಮಹತ್ಯೆ

Sep 30, 2025 - 20:46
 0  416
ಲವ್ ಸೆಕ್ಸ್ ದೋಖಾ | ಅತ್ಯಾಚಾರ ಆರೋಪಿಸಿದ 'ಮ್ಯಾಟ್ರಿಮೋನಿ' ಗರ್ಲ್ ಫ್ರೆಂಡ್;  29 ವರ್ಷದ ಇಂಜಿನಿಯರ್ ಆತ್ಮಹತ್ಯೆ

ಬಿಲಾಸ್‌ಪುರ, ಛತ್ತೀಸ್‌ಗಢ: 29 ವರ್ಷದ ಯುವ ಇಂಜಿನಿಯರ್ ಗೌರವ್ ಸವಾನಿ ತನ್ನ ಗೆಳತಿಯಿಂದ ಅತ್ಯಾಚಾರದ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಲಾಸ್‌ಪುರದಲ್ಲಿ ನಡೆದಿದೆ.

 ಸೆಪ್ಟೆಂಬರ್ 27 ರಂದು ಉಸಲಾಪುರ ರೈಲ್ವೆ ಹಳಿಯ ಬಳಿ ಗೌರವ್ ಅವರ ಶವವನ್ನು ಪತ್ತೆಹಚ್ಚಲಾಗಿದೆ. ಸ್ಥಳದಲ್ಲಿ ಸಿಕ್ಕ ಆತ್ಮಹತ್ಯೆ ಪತ್ರದಲ್ಲಿ “ನಾನು ಪ್ರೀತಿಯಲ್ಲಿ ದ್ರೋಹ ಅನುಭವಿಸಿದ್ದೇನೆ” ಎಂದು ಬರೆಯಲಾಗಿತ್ತು.

 ಗೌರವ್ ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಆ ಮಹಿಳೆಯನ್ನು ಭೇಟಿಯಾಗಿದ್ದರು. ಆರಂಭದಲ್ಲಿ ಸಂಬಂಧ ಸುಗಮವಾಗಿ ಸಾಗಿದರೂ, ನಂತರ ಮಹಿಳೆ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು. ಈ ಪ್ರಕರಣದ ಹಿನ್ನೆಲೆ, ಗೌರವ್ ಅನೇಕ ಬಾರಿ ಬಂಧಿತರಾಗಿದ್ದರು.

ಆತ್ಮಹತ್ಯೆ ಮಾಡಿಕೊಳ್ಳುವ 15 ದಿನಗಳ ಹಿಂದೆ ಅವರು ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯಾದಿದ್ದರು. ಜೈಲಿನಿಂದ ಹೊರಬಂದ ನಂತರ ಗೌರವ್ ತೀವ್ರ ಮಾನಸಿಕ ಒತ್ತಡ, ಅವಮಾನಗಳನ್ನು ಗೌರವ್ ಎದುರಿಸುತ್ತಿದ್ದರು ಎನ್ನಲಾಗಿದೆ.

 ಗೌರವ್ ಬಿಂದಾಸ್ ವ್ಯಕ್ತಿಯಾಗಿದ್ದರೂ, ಇತ್ತೀಚಿನ ಘಟನೆಗಳು ಅವರ ಮೇಲೆ ಭಾರಿ ಪರಿಣಾಮ ಬೀರಿತ್ತು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

 ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0