ಬಸ್ಸಿನಲ್ಲಿ ಪ್ರೀತಿಯ ನಾಟಕ; ಅಪ್ರಾಪ್ತ ಬಾಲೆಯನ್ನು ಗರ್ಭಿಣಿಯಾಗಿಸಿದಾತನಿಗೆ 20 ವರ್ಷಗಳ ಕಾರಗೃಹ ಶಿಕ್ಷೆ ವಿಧಿಸಿದ ವಿರಾಜಪೇಟೆ ನ್ಯಾಯಾಲಯ

Jan 15, 2026 - 19:22
Jan 15, 2026 - 19:22
 0  3.7k
ಬಸ್ಸಿನಲ್ಲಿ ಪ್ರೀತಿಯ ನಾಟಕ; ಅಪ್ರಾಪ್ತ ಬಾಲೆಯನ್ನು  ಗರ್ಭಿಣಿಯಾಗಿಸಿದಾತನಿಗೆ 20 ವರ್ಷಗಳ ಕಾರಗೃಹ ಶಿಕ್ಷೆ ವಿಧಿಸಿದ ವಿರಾಜಪೇಟೆ ನ್ಯಾಯಾಲಯ

ವಿರಾಜಪೇಟೆ:ಜ14; ಅವಳು ಅಪ್ರಾಪ್ತೆ,ಆತ ವಿವಾಹಿತ. ಬಸ್ಸಿನಲ್ಲಿ ಹುಟ್ಟಿದ ಪ್ರೀತಿ,ಬಾಲೆಗೆ ಗರ್ಭ ಕರುಣಿಸಿ ಕೊನೆಗೆ ಟಾಟಾ ಎಂದ,ವ್ಯಕ್ತಿಗೆ ಘನವೆತ್ತ ನ್ಯಾಯಾಲಯವು ಪೊಕ್ಸೊ ಕಾಯ್ದೆ ಅಡಿಯಲ್ಲಿ 20 ವರ್ಷಗಳ ಕಠಿಣ ಕಾರಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೂರ್ನಾಡು ವೆಂಕಟೇಶ್ವರ ಕಾಲೋನಿಯ ಶ್ರೀನಿವಾಸ್ ಎಂಬುವವರ ಲೈನ್ ಮನೆಯಲ್ಲಿ ವಾಸ ಪ್ರಸ್ತುತ ಮೈಸೂರು ನಗರ ಉದಯಗಿರಿ,ಕಲ್ಯಾಣಗಿರಿ ಮಾರಿಕಾಂಬಾ ದೇವಾಲಯ ಸನೀಹ ಬಿ.ಡಿ. ಕ್ವಾರ್ಟರ್ಸ್ ಶ್ರೀ ನಿವಾಸ್,ಮನೆ ಸಂಖ್ಯೆ 100 ರಲ್ಲಿ ವಾಸವಿರುವ ಪೌತಿ ರಾಘವ ಅವರ ಪುತ್ರ ಹೆಚ್.ಆರ್. ಮನೋಜ್ (26) 20 ವರ್ಷಗಳ ಕಾರಗೃಹ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಘಟನೆಯ ವಿವರ; ಶಿಕ್ಷೆ ಗುರಿಯಾದ ವ್ಯಕ್ತಿ ಮನೋಜ್ ವಿರಾಜಪೇಟೆ ನಗರ ನಿವಾಸಿ ಹೊಂದಿರುವ ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತ ಬಿಂದು ಎಂಬವವಳನ್ನು ವಿವಾಹವಾಗಿ ಮೂರ್ನಾಡು ನಲ್ಲಿ ನೆಲೆಸಿದ್ದ. ಖಾಸಗಿ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ಅಂದರೆ 2019ರಲ್ಲಿ ಮೂರ್ನಾಡು ವಿರಾಜಪೇಟೆ ಮಧ್ಯೆ ಶಾಲೆಗೆ ಎಂದು ಬಾಲಕಿ ದಿನನಿತ್ಯ ಆರೋಪಿ ಪ್ರಯಾಣಿಸುತಿದ್ದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಳು.

ದಿನನಿತ್ಯ ಆರೋಪಿ ಬಾಲಕಿಯೊಂದಿಗೆ ಮಾತನಾಡುತ್ತಾ ಸಲುಗೆಯಿಂದ ಇದ್ದ. ಸಲುಗೆಯು ಮುಂದೆ ಪ್ರೀತಿ ಪ್ರಣಯ ಎಂದು ‌ಮುಂದುವರೆಯಿತು.ಬಾಲಕಿ ಅಂದು 08ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬಾಲಕಿಯನ್ನು ಆರೋಪಿಯು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ. ಬಳಿಕ ಬಾಲಕಿ ವಾಸವಿದ್ದ ಲೈನ್ ಮನೆಯಲ್ಲಿ ಯಾರು ಇಲ್ಲದ ಸಮಯ ಸಾಧಿಸಿ ದೈಹಿಕ ಸಂಪರ್ಕ ಸಾಧಿಸಿದನು. ನಾನು ನಿನ್ನ ಮದುವೆಯಾಗುತ್ತೇನೆ ಎಂದು ನಂಬಿಕೆಯ ನಾಟಕವಾಗಿ ಎರಡು ಮೂರು ಬಾರಿ ಆತ್ಯಾಚಾರ ಎಸಗಿದ. ಪರಿಣಾಮ ಬಾಲಕಿ ಗರ್ಭ ಧರಿಸಿದಳು ಮನೆ ಮಂದಿಗೆ ತಿಳಿಯದಾಗಿತ್ತು.

ಕೊನೆಯಲ್ಲಿ ತಾ. 21-12-2019 ರಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು. ಸಾರ್ವಜನಿಕರ ಮೂಲಕ ದೊರೆತ ಮಾಹಿತಿ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಗರ್ಭಕ್ಕೆ ಕಾರಣನಾದ ವ್ಯಕ್ತಿಯ ಬಗ್ಗೆ ಮತ್ತು ನಡೆದಿರುವ ಘಟನೆ ಬಗ್ಗೆ ವಿಸ್ತೃತ ವಿವರಣೆ ನೀಡುತ್ತಾಳೆ. ಬಾಲಕಿ ನೀಡಿರುವ ದೂರು ಮತ್ತು ಮಾಹಿತಿ ಅಧಾರದ ಮೇಲೆ ತಾ. 08-01-2020 ರಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಮನೋಜ್ ಮೇಲೆ 376 ಐ.ಪಿ.ಸಿ.4,6 ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಾಗುತ್ತದೆ. ತನಿಖೆ ಕೈಗೆತ್ತಿಕೊಂಡ ವಿರಾಜಪೇಟೆ ವೃತ್ತ ನಿರೀಕ್ಷರು ತನಿಖೆ ಮುಂದುವರೆಸಿ.ತಾ.13.01.2020 ರಂದು ಮೂರ್ನಾಡು ನಲ್ಲಿ ಪ್ರಕರಣದ ಆರೋಪಿಯನ್ನು ಬಂಧಿಸುತ್ತಾರೆ.ತಾ.12-02-2020 ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸುತ್ತಾರೆ.

 ನ್ಯಾಯಾಲಯದಲ್ಲಿ ಆರೋಪಿಯ ಮೇಲೆ ಹೊರಸಿದ್ದ ಆರೋಪವು ಸಾಭಿತದ ಹಿನ್ನೆಲೆಯಲ್ಲಿ ವಿರಾಜಪೇಟೆ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಶೇಷ ಪ್ರಕರಣ ಎಂದು ಪರಿಗಣಿಸಿತು. ತಾ.14-01-2026 ರಂದು ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶರಾದ ಎಸ್. ನಟರಾಜು ಅವರು ಕಲಂ 06 ಪೋಕ್ಸೋ ಕಾಯ್ದೆ ರೆ/ವಿ 376(2) ಐ.ಪಿ.ಸಿ. ಕಾಯ್ದೆಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25,000 ರೂ ದಂಡ ವಿಧಿಸಿತು. ಒಂದು ವೇಳೆ ದಂಡ ಪಾವತಿಸಲು ವಿಫಲವಾದಲ್ಲಿ 06 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಸರ್ಕಾರಿ ಅಭಿಯೋಜಕರಾದ ಯಾಶಿನ್ ಅಹಮ್ಮದ್ ಅವರು ಸರ್ಕಾರದ ಪರ ವಾದ ಮಂಡಿಸಿದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 2
Dislike Dislike 0
Love Love 5
Funny Funny 0
Angry Angry 2
Sad Sad 2
Wow Wow 1