MDMA ಮತ್ತು ಗಾಂಜಾ ಮಾರಾಟಕ್ಕೆ ಯತ್ನ: ಗೋಣಿಕೊಪ್ಪಲಿನ ವ್ಯಕ್ತಿಯ ಬಂಧನ

Jun 18, 2025 - 19:31
Jun 18, 2025 - 19:49
 0  635
MDMA ಮತ್ತು ಗಾಂಜಾ ಮಾರಾಟಕ್ಕೆ ಯತ್ನ: ಗೋಣಿಕೊಪ್ಪಲಿನ ವ್ಯಕ್ತಿಯ ಬಂಧನ

ಪೊನ್ನಂಪೇಟೆ: ಪೊಲೀಸ್ ಠಾಣಾ ವ್ಯಾಪ್ತಿಯ ಪೊನ್ನಂಪೇಟೆ ಪಟ್ಟಣದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಮತ್ತು ಗಾಂಜಾ ಸರಬರಾಜು ಹಾಗೂ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.ಜೂನ್ 17 ರಂದು ಪೊನ್ನಂಪೇಟೆ ಪಟ್ಟಣದಲ್ಲಿ ಗಾಂಜಾ ಮತ್ತು MDMA ಮಾದಕ ವಸ್ತು 4 ಗ್ರಾಂ ಹಾಗೂ ಒಂದು ಕೆ.ಜಿ 70 ಗ್ರಾಂ ಗಾಂಜಾ ಮಾರಾಟ ಮಾಡುತ್ತಿದ್ದ  ಗೋಣಿಕೊಪ್ಪಲಿನ ನಿವಾಸಿ ಗುರುದತ್(30) ಎಂಬಾತನನ್ನು ಬಂಧಿಸಲಾಗಿದೆ.ಆರೋಪಿಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ KA-12 Z 7073 ಮಾರುತಿ ಬ್ರೀಜಾ ಕಾರು ವಶಕ್ಕೆ ಪಡಿಸಲಾಗಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0