ಅಮ್ಮತ್ತಿ ಕೊಡವ ಸಮಾಜದ ವತಿಯಿಂದ ಶಾಸಕ ಎಎಸ್ ಪೊನ್ನಣ್ಣ ರವರಿಗೆ ಸನ್ಮಾನ

Mar 30, 2026 - 23:12
 0  230
ಅಮ್ಮತ್ತಿ ಕೊಡವ ಸಮಾಜದ ವತಿಯಿಂದ  ಶಾಸಕ ಎಎಸ್ ಪೊನ್ನಣ್ಣ ರವರಿಗೆ ಸನ್ಮಾನ

ವಿರಾಜಪೇಟೆ; ಅಮ್ಮತ್ತಿ ಕೊಡವ ಸಮಾಜದ ಪ್ರಮುಖರು ಇಂದು ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ರವರನ್ನು ಸನ್ಮಾನಿಸಿದರು.

ತಾವು ಶಾಸಕರಾಗಿ ಆಯ್ಕೆಯಾದಲ್ಲಿನಿಂದ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಿರಂತರ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಗಲಿರಳು ಶ್ರಮಿಸುತ್ತಿರುವುದಕ್ಕೆ ಹಾಗೂ ವಿಶೇಷವಾಗಿ ಜಮ್ಮಾಬಾಣೆ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ದಶಕಗಳಿಂದ ಕೊಡವ ಸಮುದಾಯದವರನ್ನು ಕೊಡಗರು ಎಂದು ಸಂಬೋಧಿಸುತ್ತಿರುವುದನ್ನು ಸರಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಬದಲಾಯಿಸಿ, ಕೊಡವರು ಎಂದು ನಮೂದಿಸುವಂತೆ ತಿದ್ದುಪಡಿ ಮಾಡಿದ ವಿಶೇಷ ಪ್ರಯತ್ನಕ್ಕೆ ಗೌರವಿಸುವ ಸಲುವಾಗಿ ಈ ಸನ್ಮಾನ ಕಾರ್ಯಕ್ರಮ ಮಾಡಲಾಯಿತು ಎಂದು ಅಮ್ಮತಿ ಕೊಡವ ಸಮಾಜದ ಪ್ರಮುಖರು ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರು ಪ್ರಕಾಶ್, ಸದಸ್ಯರು ಧನು ಉತ್ತಯ್ಯ, ಭೀಮಯ್ಯ, ಧನ್ಯ ದೇವಯ್ಯ, ಅಪ್ಪಣ್ಣ, ಶ್ಯಾಮ್ ಬೋಪಣ್ಣ, ಸಮಾಜ ಸೇವಕರು ಚೊಕ್ಕಂಡ ಸಂಜು ಸುಬ್ಬಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0