ಕೊಂಡಂಗೇರಿಯಲ್ಲಿ ಕತ್ತಣಿರ ಕಾಂಪ್ಲೆಕ್ಸ್ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

Feb 15, 2026 - 14:05
 0  731
ಕೊಂಡಂಗೇರಿಯಲ್ಲಿ ಕತ್ತಣಿರ ಕಾಂಪ್ಲೆಕ್ಸ್ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ; ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ತಮ್ಮ ಕ್ಷೇತ್ರದ ಕೊಂಡಂಗೇರಿ ಗ್ರಾಮಕ್ಕೆ ಭೇಟಿ ನೀಡಿದರು. ಕೊಂಡಂಗೇರಿ ನೂತನವಾಗಿ ಪ್ರಾರಂಭಗೊಂಡ ಕತ್ತಣಿರ ಕಾಂಪ್ಲೆಕ್ಸ್ ಹಾಗೂ ಎಂ ಎಂ ಸಿ ಹೆಲ್ತ್ ಕ್ಲಿನಿಕ್ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 ಉದ್ಘಾಟನೆ ನೆರೆವೇರಿಸಿದ ಮಾನ್ಯ ಶಾಸಕರು ಕಥಣೀರ ಕಾಂಪ್ಲೆಕ್ಸ್ ನಲ್ಲಿ ಇರುವ ಈ ಹೆಲ್ತ್ ಕ್ಲಿನಿಕ್ ಹಾಗೂ ಕತ್ತಣಿರ ಕಾಂಪ್ಲೆಕ್ಸ್ ಮಾಲೀಕರಿಗೆ ಯಶಸ್ಸು ದೊರಕಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಹಾಲುಗುಂದ ಪಂಚಾಯಿತಿ ಅಧ್ಯಕ್ಷರು ದಿನೇಶ್, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರು ದುಡಿಯಂಡ ಸೂಫಿ ಹಾಜಿ, ಕೊಂಡಂಗೇರಿ ಮುಸ್ಲಿಂ ಜಮಾತ್ ಅಧ್ಯಕ್ಷರು ಜನಾಬ್ ಪೆರಿಯಂಡ ಯೂಸುಫ್, ತಾಲೂಕು ಕೆಡಿಪಿ ಸದಸ್ಯರು ರಫೀಕ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಪಂಚಾಯತ್ ಸದಸ್ಯರು ಅಂದಾಯಿ, ಪಕ್ಷದ ಮುಖಂಡರು ಮುಕಟೀರ ಸಂದೀಪ್, ಆಪ್ರು ರವೀಂದ್ರ, ಬಶೀರ್, ಯುವ ಕಾಂಗ್ರೆಸ್ ಉಪಾಧ್ಯಕ್ಷರು ಮೈಸಿ ಕಥಣೀರ, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0