ತುರ್ತು ನೀರು ಸರಬರಾಜು ವ್ಯವಸ್ಥೆಯನ್ನು ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ
admincoorgdaily

ಪೊನ್ನಂಪೇಟೆ; ಈ ಬಾರಿಯ ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ನೀರಿನ ಅಭಾವದಿಂದ ಬಳಲಬಾರದು ಎಂಬ ಸದುದ್ದೇಶದಿಂದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ವೈಯುಕ್ತಿಕ ಕೊಡುಗೆ ₹ 28 ಲಕ್ಷದಲ್ಲಿ ಪೊನ್ನಂಪೇಟೆ ಭಾಗದಲ್ಲಿ ಅಗತ್ಯ ಇರುವ ಸಾರ್ವಜನಿಕರಿಗೆ ತುರ್ತು ನೀರಿನ ಸೌಲಭ್ಯ ಕಲ್ಪಿಸಲು ಟ್ಯಾಂಕರ್ ವಾಹನವನ್ನು ವ್ಯವಸ್ಥೆ ಮಾಡಿದ್ದಾರೆ.
ಇಂದು ಪೊನ್ನಂಪೇಟೆಯಲ್ಲಿ ಈ ವಾಹನವನ್ನು ಉದ್ಘಾಟಿಸಿ ಶಾಸಕರು ಶುಭಕೋರಿ ಮಾತನಾಡುತ್ತಾ, ತೀವ್ರ ಬೇಸಿಗೆಯಿಂದ ನೀರಿನ ಅಭಾವ ತಲೆದೋರಿದ್ದು, ಸಾರ್ವಜನಿಕರಿಗೆ ನೀರಿನ ಅಭಾವ ಆಗದಂತೆ ನೋಡಿಕೊಳ್ಳಲು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ಮಹಿಳಾ ಅಧ್ಯಕ್ಷರು ಆಶಾ ಪೂಣಚ್ಚ, ಪಂಚಾಯಿತಿ ಅಧ್ಯಕ್ಷರು ಅಣ್ಣಿರ ಹರೀಶ್, ಉಪಾಧ್ಯಕ್ಷರು ಆಲಿರ ರಶೀದ್, ಮಾಜಿ ಮಹಿಳಾ ಅಧ್ಯಕ್ಷರು ಭಾರತಿ, ಸುನಿತಾ, ಅನಿತಾ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಜುನೈದ್, ಹಿರಿಯರು ಮುಕಳೇರ ಕುಶಾಲಪ್ಪ, ಜಿಮ್ಮಿ ಅಣ್ಣಯ್ಯ, ಕೊಲ್ಲಿರ ಬೋಪಣ್ಣ, ಅಜ್ಜಿಕುಟ್ಟಿರ ಪೊನ್ನು, ಪಮ್ಮು, ಗಿರೀಶ್, ಮನು, ಮಚ್ಚಾಮಾಡ ಮನು, ಸಿದ್ದು ನಾಚಪ್ಪ, ಅನಿಶ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.