ಶಾಸಕ‌ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಖಚಿತ; ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಎಎಸ್ ಪೊನ್ನಣ್ಣ

Jun 1, 2026 - 13:19
 0  639
ಶಾಸಕ‌ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಖಚಿತ; ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಎಎಸ್ ಪೊನ್ನಣ್ಣ

ಬೆಂಗಳೂರು:ಜೂನ್ 03 ರಂದು ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು,ಇದೀಗ ಸಚಿವ ಸಂಪುಟ‌ ಪುನರ್ ರಚನೆ ಕಸರತ್ತು ಜೋರಾಗಿ ನಡೆಯುತ್ತಿದೆ.

ಮಂತ್ರಿ ಸ್ಥಾನಗಿಟ್ಟಿಸಿಕೊಳ್ಳಲು ಶಾಸಕರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಇದೀಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಒಂದೇ ವಿಮಾನದಲ್ಲಿ ಹೈಕಮಾಂಡ್ ಭೇಟಿಗಾಗಿ ದೆಹಲಿ ತೆರಳಿದ್ದು,ಅವರೊಂದಿಗೆ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ,ಎಚ್.ಸಿ ಮಹದೇವಪ್ಪ,ಕೆ.ಜೆ ಜಾರ್ಜ್ ಹಾಗೂ ಶಾಸಕ‌ ಎಎಸ್ ಪೊನ್ನಣ್ಣ ದೆಹಲಿಗೆ ತೆರಳಿದ್ದಾರೆ.ಮೂಲಗಳ‌ ಪ್ರಕಾರ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ ‌ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರು ಗಟ್ಟಿಯಾಗಿ ಎಎಸ್ ಪೊನ್ನಣ್ಣ ಅವರ ಪರವಾಗಿ ನಿಂತಿದ್ದು,ಪೊನ್ನಣ್ಣ ಅವರಿಗೆ ಸಚಿವ ಕೊಡಲೇಬೇಕೆಂದು ಹೈಕಮಾಂಡ್ ನಾಯಕರೊಂದಿಗೆ ಹೇಳಿದ್ದಾರೆ ಮಾಹಿತಿ ಲಭ್ಯವಾಗಿದೆ.

What's Your Reaction?

Like Like 0
Dislike Dislike 0
Love Love 2
Funny Funny 1
Angry Angry 0
Sad Sad 0
Wow Wow 0