Kodagu

ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ ಶಾಸಕ ಪೊನ್ನಣ್ಣ ಸಾಂತ್ವನ

admincoorgdaily

ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ ಶಾಸಕ ಪೊನ್ನಣ್ಣ ಸಾಂತ್ವನ

ಬಾಳೆಕೌವು, ಜೂ. 26: ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಬಾಳೆಕೌವು ನಿವಾಸಿ ಕಾಳ ಅವರನ್ನು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಕೆಲ ತಿಂಗಳ ಹಿಂದೆ ಕೆಲಸ ಮಾಡುವಾಗ ಮರದಿಂದ ಬಿದ್ದು ಸೊಂಟಕ್ಕೆ ತೀವ್ರ ಗಾಯಗೊಂಡಿದ್ದ ಕಾಳ ಅವರಿಗೆ ಶಾಸಕ ಪೊನ್ನಣ್ಣ ಅವರು ಚಿಕಿತ್ಸೆಗೆ ಸಂಪೂರ್ಣ ನೆರವು ನೀಡಿದ್ದರು. ಇಂದು ಅವರ ಮನೆಗೆ ಸೌಜನ್ಯದ ಭೇಟಿ ನೀಡಿದ ಶಾಸಕರು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. "ಬಡ ಕುಟುಂಬದ ಕಾಳ ಅವರಿಗೆ ಯಾವುದೇ ತೊಂದರೆಯಾದರೂ ತಕ್ಷಣ ನನ್ನನ್ನು ಸಂಪರ್ಕಿಸಿ" ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.