ಹುಲಿ ಸೆರೆಗೆ ಶಾಸಕ ಪೊನ್ನಣ್ಣ ಸೂಚನೆ

ಹುಲಿ ಸೆರೆಗೆ ಶಾಸಕ ಪೊನ್ನಣ್ಣ ಸೂಚನೆ

ಗೋಣಿಕೊಪ್ಪ; ದಕ್ಷಿಣ ಕೊಡಗಿನ ಗೋಣಿಕೊಪ್ಪ ಮತ್ತು ತಿತಿಮತಿ ವ್ಯಾಪ್ತಿಯಲ್ಲಿ ಹುಲಿ ಓಡಾಟದಿಂದ ಜನರಲ್ಲಿ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ, ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ , ತಕ್ಷಣವೇ ಹುಲಿ ಪತ್ತೆ ಹಚ್ಚಿ ಸೆರೆಹಿಡಿಯಲು ಕೊಂಬಿಂಗ್ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ.