ಮೇ 5 ರಂದು ಮಾದಾಪುರ ಕೊಡವ ಸಮಾಜದ ಸಮುದಾಯ ಭವನ ಲೋಕಾಪ೯ಣೆ
ಮಡಿಕೇರಿ ಮೇ 1 - ಮಾದಾಪುರದಲ್ಲಿನ ಕೊಡವ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನೆಯು ಇದೇ ಮೇ 5 ರಂದು ಮಂಗಳವಾರ ಜರುಗಲಿದ್ದು ಸಂಸದ ಮತ್ತು ಮಾಜಿ ಮುಖ್ಯಮಂತ್ರಿ . ಬಸವರಾಜ ಬೊಮ್ಮಾಯಿ ನೂತನವಾಗಿ ನಿಮಿ೯ಸಲ್ಪಟ್ಟ ಸುಸಜ್ಜಿತ ಸಮುದಾಯ ಭವನವನ್ನು ಲೋಕಾಪ೯ಣೆ ಮಾಡಲಿದ್ದಾರೆ ಎಂದು ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನು ಮೇದಪ್ಪ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾದಾಪುರ ಕೊಡವ ಸಮಾಜ ಸಮುದಾಯ ಭವನದ ಬಗ್ಗೆ ಮಾಹಿತಿ ನೀಡಿದ ಎಂ.ಮನುಮೇದಪ್ಪ, ಕನಾ೯ಟಕದಲ್ಲಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದಭ೯ 1 ಕೋಟಿ ರು. ಅನುದಾನ ಈ ಉದ್ದೇಶಕ್ಕೆ ಬಿಡುಗಡೆಯಾಗಿತ್ತು.ಈ ಪೈಕಿ 75 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು 25 ಲಕ್ಷ ರು. ಅನುದಾನ ದೊರಕಬೇಕಾಗಿದೆ ಎಂದರು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಅವರ ವಿಶೇಷ ಪ್ರಯತ್ನದಿಂದ ಹಾಗೂ ಮಾಜಿ ಸಂಸದರು. ಮಾಜಿ ಶಾಸಕರು ಪ್ರಯತ್ನದಿಂದ ಸೂಕ್ತ ಅನುದಾನ ನೀಡಲ್ಪಟ್ಟಿತ್ತು ಅನೇಕ ದಾನಿಗಳಿಂದಲೂ ಆಥಿ೯ಕ ಸಂಪನ್ಮೂಲ ಸಂಗ್ರಹವಾಗಿದೆ ಎಂದು ಸ್ಮರಿಸಿಕೊಂಡ ಮೇದಪ್ಪ, ಹಾಲಿ ಶಾಸಕ ಡಾ.ಮಂಥರ್ ಗೌಡ ಅವರು 10 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನು ಸಮುದಾಯ ಭವನಕ್ಕೆ ನಿಮಿ೯ಸಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಕೊಡವ ಸಮುದಾಯ ಭವನವು 4.50 ಕೋಟಿ ರು. ವೆಚ್ಚದಲ್ಲಿ ನಿಮಾ೯ಣವಾಗಿದ್ದು ಈವರೆಗೆ 3.50 ಕೋಟಿ ರು.ಗಳಷ್ಟು ಕಾಮಗಾರಿ ಕಾಯ೯ಗಳು ನಡೆದಿದ್ದು ಇನ್ನೂ 1 ಕೋಟಿ ಮೌಲ್ಯದ ಕಾಮಗಾರಿ ಬಾಕಿಯಿದೆ. ಸಮುದಾಯ ಭವನಕ್ಕಾಗಿ 5 ಎಕ್ರೆ ಜಾಗವನ್ನು ಮಾದಾಪುರ ಕೊಡವ ಸಮಾಜದಿಂದ ಖರೀದಿಸಲಾಗಿದ್ದು, ಇಲ್ಲಿ 1 ಸಾವಿರ ವಾಹನಗಳ ನಿಲುಗಡೆಗೆ ಅವಕಾಶವಿದೆ. ಸಮುದಾಯ ಭವನದೊಳಕ್ಕೆ 700 ಆಸನಗಳ ಸಾಮಥ್ಯ೯ವಿದ್ದು ಅಂದಾಜು 2 ಸಾವಿರ ಜನರು ಹಾಯಾಗಿ ಪಾಲ್ಗೊಳ್ಳುವಷ್ಟು ಸಾಮಥ್ಯ೯ವನ್ನು ಸಮುದಾಯ ಭವನ ಹೊಂದಿದೆ ಎಂದೂ ಎಂ.ಪಿ. ಮೇದಪ್ಪ ವಿವರಿಸಿದರು. ವಿವಾಹ ಸಮಾರಂಭ, ನಾಮಕರಣ, ನಿಶ್ಚಿತಾಥ೯ ಸೇರಿದಂತೆ ಎಲ್ಲಾ ರೀತಿಯ ಸಭೆ ಸಮಾರಂಭಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕೊಡವ ಮಾತ್ರವಲ್ಲದೇ ಸಮುದಾಯ ಭವನದಲ್ಲಿ ಕೊಡವೇತರರ ಕಾಯ೯ಕ್ರಮಗಳಿಗೂ ಅವಕಾಶ ನೀಡಲಾಗಿದೆ ಎಂದೂ ಅವರು ತಿಳಿಸಿದರು. 5 ಅತಿಥಿ ಗೖಹಗಳನ್ನೂ ನಿಮಿ೯ಸಲಾಗಿದ, ಭವನವನ್ನು ಸುಸಜ್ಜಿತವಾಗಿ ರೂಪಿಸಲಾಗಿದೆ ಎಂದರು.
ಕಾಯ೯ಕ್ರಮದ ವಿವರ -
ಮೇ 5 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಆಯೋಜಿತ ಉದ್ಘಾಟನಾ ಕಾಯ೯ಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಸಂಸದ ಯದುವೀರ್ ಒಡೆಯರ್, ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ, ಶಾಸಕರು ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎಸ್. ಅಶ್ವಥನಾರಾಯಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ ಎಂ.ಸಿ. ನಾಣಯ್ಯ, ವಿಧಾನಸಭೆಯ ಮಾಜಿ ಸಭಾಪತಿ ಕೆ.ಜಿ.ಬೋಪಯ್ಯ,ಮಾಜಿ ಸಚಿವ ಬಿ.ಎ.ಜೀವಿಜಯ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನಪರಿಷತ್ ಮಾಜಿ ಶಾಸಕರಾದ ಎಂ.ಪಿ. ಸುನೀಲ್ ಸುಬ್ರಹ್ಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಎಸ್.ಜಿ.ಮೇದಪ್ಪ, ಕನಾ೯ಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ, ಸಾಂಸ್ಕೖತಿಕ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾಯ೯ಪ್ಪ, ಕೊಡಗು ಜಿಲ್ಲಾಧಿಕಾರಿ ಎಸ್.ಜಿ.ಸೋಮಶೇಖರ್, ಪೊಲೀಸ್ ವರಿಷ್ಟಾಧಿಕಾರಿ ಬಿಂದುಮಣಿ, ಅಂತರರಾಷ್ಟ್ರೀಯ ಟೆನ್ನಿಸ್ ಆಟಗಾರ ಪದ್ಮಶ್ರೀ ಮಚ್ಚಂಡ ರೋಹನ್ ಬೋಪಣ್ಣ, ಎಸ್.ಎಲ್.ಎನ್. ಗ್ರೂಪ್ ನ ಉದ್ಯಮಿಗಳಾದ ಸಾತಪ್ಪನ್ ವಿಶ್ವನಾಥ್, ಟಿ.ಜಾನ್ ಗ್ರೂಪ್ ಆಫ್ ಕಂಪೆನಿಯ ವ್ಯವಸ್ಥಾಪಕ ನಿದೇ೯ಶಕ ಪೌಲ್ ಜಾನ್. ವಿಶೇಷ ಆಹ್ವಾನಿತರಾಗಿ ಉದ್ಯಮಿ ನಾಪಂಡ ಮುತ್ತಪ್ಪ, ಇಂಜಿನಿಯರ್ ಮುಕ್ಕಾಟಿರ ನಂಜಪ್ಪ ಹಾಗೂ ಸವ೯ ಕೊಡವ ಸಮಾಜಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಎಂದು ಮನುಮೇದಪ್ಪ ಮಾಹಿತಿ ನೀಡಿದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಗೌರವಾಧ್ಯಕ್ಷರಾಗಿರುವ ಮಾದಾಪುರ ಕೊಡವ ಸಮಾಜದ ಉಪಾಧ್ಯಕ್ಷರಾಗಿ ಪಾಸುರ ಎನ್. ಉತ್ತಪ್ಪ, ಕಾಯ೯ದಶಿ೯ಯಾಗಿ ನಾಗಂಡ ಸಿ.ಕಾಳಪ್ಪ ಖಜಾಂಜಿಯಾಗಿ ಮಚ್ಚಂಡ ಜಿ.ಬೋಪಣ್ಣ ಕಾಯ೯ನಿವ೯ಹಿಸುತ್ತಿದ್ದಾರೆ ಎಂದೂ ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾದಾಪುರ ಕೊಡವ ಸಮಾಜದ ಗೌರವ ಕಾಯ೯ದಶಿ೯ ಐಚೆಟ್ಟಿರ ನಂಜಪ್ಪ, ನಿದೇ೯ಶಕರಾದ ನಾಪಂಡ ಉಮೇಶ್ ಉತ್ತಪ್ಪ, ಮಾಳೆಯಂಡ ಜೋಯಪ್ಪ ಉಪಸ್ಥಿತರಿದ್ದರು.