ಮಡಿಕೇರಿ:ಮೃತ ಪೊಲೀಸ್ ಸಿಬ್ಬಂದಿ ಪತ್ನಿಗೆ ಬ್ಯಾಂಕ್ ನಿಂದ 10 ಲಕ್ಷ ವಿಮಾ ಮೊತ್ತ ಪಾವತಿ

Nov 26, 2025 - 16:32
 0  1.2k
ಮಡಿಕೇರಿ:ಮೃತ ಪೊಲೀಸ್ ಸಿಬ್ಬಂದಿ ಪತ್ನಿಗೆ ಬ್ಯಾಂಕ್ ನಿಂದ  10 ಲಕ್ಷ ವಿಮಾ ಮೊತ್ತ ಪಾವತಿ

ಮಡಿಕೇರಿ:ಕೊಡಗು ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ಸಶಸ್ತ್ರ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯ್.ಎಂ.ಎನ್, ಹೆಡ್ ಕಾನ್ಸ್ಟೇಬಲ್ ದಿನಾಂಕ: 06-08-2025 ರಂದು ಹೃದಯಾಘತದಿಂದಮೃತಪಟ್ಟಿದ್ದರು.

 ವಿಜಯ್ ರವರು ಮಡಿಕೇರಿಯಲ್ಲಿನ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಪೊಲೀಸ್ ಸ್ಕಾಲರಿ ಪ್ಯಾಕೇಜ್ನ ಅಡಿಯಲ್ಲಿ ಖಾತೆ ಮಾಡಿಸಿ ವೇತನವನ್ನು ಬ್ಯಾಂಕ್ ನಿಂದ ಪಡೆಯುತ್ತಿದ್ದರು.ಹೃದಯಾಘತದಿಂದ ಮೃತ ಪಟ್ಟ ವಿಜಯ್ ರವರ ಬ್ಯಾಂಕ್ ಆಫ್ ಬರೋಡ ಖಾತೆಯ ನಾಮಿನಿಯಾಗಿದ್ದ ಅವರ ಪತ್ನಿ ರತ್ನಮ್ಮ ಸಿ ಅವರಿಗೆ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು. ಕೊಡಗು ಜಿಲ್ಲೆ ರವರಮುಖಾಂತರ ಸಾಯಿ ಗಣೇಶ್ ಉಜ್ಜಿನ, ರಿಜನಲ್ ಮ್ಯಾನೆಜರ್, ಬ್ಯಾಂಕ್ ಆಫ್ ಬರೋಡ,ಪುತ್ತೂರು ರಿಜನ್, ಏರ್ ಕಮಾಂಡರ್ ತರುಣ ಕುಮಾರ್ ಸಿನ್ಹಾ, ಡಿಫೆನ್ಸ್ ಬ್ಯಾಂಕಿಂಗ್ ಅಡ್ಡೆಸರ್, ದೀಪ್ತಿ. ಸಿ,ಬ್ಯಾಂಕ್ ಆಫ್ಚೀಫ್ ಮ್ಯಾನೆಜರ್, ಬ್ಯಾಂಕ್ ಆಫ್ ಬರೋಡ, ಮಡಿಕೇರಿ ಶಾಖೆ ರವರುಗಳು ಬ್ಯಾಂಕ್ ಆಫ್ ಬರೋಡ, ಮಡಿಕೇರಿ ಶಾಖೆಯಲ್ಲಿನ ಸ್ಯಾಲರಿ ಪ್ಯಾಕೇಜ್ ಖಾತೆ ಅಡಿಯಲ್ಲಿ ಇಂದು ವಿಮಾ ಮೊತ್ತ ರೂ. 10 ಲಕ್ಷ ರೂಪಾಯಿಗಳ ಚೆಕ್ ಅನ್ನು ವಿತರಿಸಲಾಯಿತು.

ದಿವಂಗತ ವಿಜಯ್.ಎಂ.ಎನ್ ರವರಪತ್ನಿ ರತ್ನಮ್ಮಸಿ ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ನೀಡುವ ಕುರಿತು ಕ್ರಮ ಕೈಗೊಳ್ಳಲಾಗಿರುತ್ತದೆ.

ದಿ|| ವಿಜಯ್.ಎಂ.ಎನ್ ರವರ ಕುಟುಂಬದವರಿಗೆ ವಿಮಾ ಮೊತ್ತ ರೂ. 10 ಲಕ್ಷ ರೂಪಾಯಿಗಳ ಚೆಕ್ ಅನ್ನು ನೀಡಿರುವ ಸಾಯಿ ಗಣೇಶ್ ಉಜ್ಜಿನ, ರಿಜನಲ್ ಮ್ಯಾನೆಜರ್, ಬ್ಯಾಂಕ್ ಆಫ್ ಬರೋಡ, ಮತ್ತೂರು ರಿಜನ್, ಏರ್ ಕಮಾಂಡರ್ ತರುಣ ಕುಮಾರ್ ಸಿನ್ಹಾ, ಡಿಫೆನ್ಸ್ ಬ್ಯಾಂಕಿಂಗ್ ಅಡ್ಡೆಸರ್, ಶ

ದೀಪ್ತಿ ಸಿ, ಚೀಫ್ ಮ್ಯಾನೆಜರ್, ಬ್ಯಾಂಕ್ ಆಫ್ ಬರೋಡ, ಮಡಿಕೇರಿ ಶಾಖೆ ಇವರಿಗೆ ಕೆ.ರಾಮರಾಜನ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ದಿನೇಶ್ ಕುಮಾರ್.ಬಿ.ಪಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಧನ್ಯವಾದವನ್ನು ತಿಳಿಸಿರುತ್ತಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0