ಮಾಂದಲ್ಪಟ್ಟಿಗೆ ಪ್ರವಾಸಕ್ಕೆ ಬಂದ ಬೆಂಗಳೂರು ಮೂಲದ ವ್ಯಕ್ತಿಯಿಂದ ಅಧಿಕ ಹಣ ವಸೂಲಿ ಪ್ರಕರಣ; ವೈಟ್ ಬೋರ್ಡ್ ವಾಹನಕ್ಕೆ ಹಳದಿ ಬೋರ್ಡ್ ಅಳವಡಿಸಿದ್ದ ವಾಹನ‌ ಚಾಲಕನ ವಿರುದ್ಧ ಪ್ರಕರಣ ದಾಖಲು

Jan 27, 2026 - 20:35
 0  3.2k
ಮಾಂದಲ್ಪಟ್ಟಿಗೆ ಪ್ರವಾಸಕ್ಕೆ ಬಂದ ಬೆಂಗಳೂರು ಮೂಲದ ವ್ಯಕ್ತಿಯಿಂದ ಅಧಿಕ ಹಣ ವಸೂಲಿ ಪ್ರಕರಣ;  ವೈಟ್ ಬೋರ್ಡ್ ವಾಹನಕ್ಕೆ ಹಳದಿ ಬೋರ್ಡ್ ಅಳವಡಿಸಿದ್ದ ವಾಹನ‌ ಚಾಲಕನ ವಿರುದ್ಧ ಪ್ರಕರಣ ದಾಖಲು

ಮಡಿಕೇರಿ, ಜ 27: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರುವ ಪ್ರವಾಸಿ ತಾಣವಾದ ಮಾಂದಲಪಟ್ಟಿಗೆ ಸಂಬಂಧಿಸಿದ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದಿನಾಂಕ 26-01-2026 ರಂದು ವೈರಲ್ ಆಗಿತ್ತು.

ಸದರಿ ವಿಡಿಯೋವನ್ನು ಪರಿಶೀಲನೆ ಮಾಡಲಾಗಿ ವಿಡಿಯೋದಲ್ಲಿ ಬೆಂಗಳೂರಿನಿಂದ ಬಂದ ಅಂಕಿತಾ ಮತ್ತು ಕುಟುಂಬ ವರ್ಗದವರು ಪ್ರವಾಸ ಸಂಬಂಧ ಕೊಡಗಿನ ಮಾಂದಲಪಟ್ಟಿಗೆ ತೆರಳಲು 25-01-2026 8 KA-12-ಪಿ-7631ರ ವಾಹನವನ್ನು ವಿಚಾರಿಸಿದ್ದಾಗ 4000/- ಬಾಡಿಗೆ ಎಂದು ತಿಳಿಸಿರುತ್ತಾರೆ. ನಂತರ ಜಿಲ್ಲಾಧಿಕಾರಿಗಳು ಮಾಂದಲಪಟ್ಟಿ ಪ್ರವಾಸಿ ತಾಣಕ್ಕೆ ತೆರಳುವ ಚಾಲಕ/ಮಾಲೀಕರ ಸಭೆ ಕರೆದು 2500/- ಹಣ ಪಡೆಯುವಂತೆ ಸೂಚನೆ ನೀಡಿ ಪ್ರವಾಸಿಗರಿಗೆ ಕಾಣುವ ರೀತಿಯಲ್ಲಿ ಬೋರ್ಡ್ ಆಳವಡಿಸಿರುವುದರ ಬಗ್ಗೆ ತಿಳಿಸಿದಾಗ 4000/-ಬಾಡಿಗೆ ಎಲ್ಲಾರೂ ತೆಗೆದುಕೊಳ್ಳುತ್ತಾರೆ ನೀವು ಪಾವತಿ ಮಾಡಬೇಕೆಂದು ತಿಳಿಸಿರುತ್ತಾನೆ.

ಅಂಕಿತಾ ಮತ್ತು ಕುಟುಂಬ ವರ್ಗದವರು ಕೆಎ-12-ಪಿ-7631ರ ವಾಹನದಲ್ಲಿ ತೆರಳಿದ್ದು, ಅರಣ್ಯ ಇಲಾಖೆಯ ಚೆಕ್ ಪೋಸ್ಟ್ಗೆ 500/- ರೂ. ಹಣ ನೀಡಬೇಕೆಂದು ಹಣ ಪಡೆದು 50 ರೂ. ಮಾತ್ರ ನೀಡಿರುತ್ತಾನೆ. ನಂತರ ಮಾಂದಲಪಟ್ಟಿಯಲ್ಲಿ ಪ್ರವಾಸ ಮುಗಿಸಿ ಬಂದಾಗ ಹೆಚ್ಚುವರಿಯಾಗಿ 500 ರೂ. ಹಣ ನೀಡಬೇಕು ಎಂದು ಜೋರು ಮಾಡಿ ಗದರಿಸಿ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿರುವ ಬಗ್ಗೆ ತಮಗೆ ಆದ ಅನ್ಯಾಯದ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವಾಹನ ಸಂಖ್ಯೆ ಕೆಎ-12-ಪಿ-7631 ಮತ್ತು ಆರೋಪಿ ಶವಿನ್  ಕುಮಾರ್ ಎಂದು ತಿಳಿಸಿರುತ್ತಾರೆ.

ಈ ವಿಡಿಯೋ ಬಗ್ಗೆ ಮಾಹಿತಿ ಪಡೆದ ಕೂಡಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ್ ಹೆಚ್.ವಿ. ಮತ್ತು ಮಡಿಕೇರಿ ಸಂಚಾರಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಧರ್‌ರವರ ತಂಡ ಮಡಿಕೇರಿ ನಗರ, ನಂದಿಮೊಟ್ಟೆ, ಮಾಂದಲಪಟ್ಟಿಯಲ್ಲಿ ಜೀಪಿನ ಬಗ್ಗೆ ವಿಚಾರಣೆ ಮಾಡಿ ಜೀಪು ಚಾಲಕ ಮತ್ತು ಜೀಪು ಪತ್ತೆ ಹಚ್ಚಿ ಜೀಪು ಚಾಲಕ ಶವಿನ್ ಕುಮಾರ್ ಎಂದು ತಿಳಿದು ಬಂದಿರುತ್ತದೆ. ಆರೋಪಿ ಶವಿನ್ ಕುರ್ಮಾರವರಲ್ಲಿ ನಡೆದ ಘಟನೆ ಬಗ್ಗೆ ವಿಚಾರಣೆ ಮಾಡಲಾಗಿ ಪ್ರಾಥಮಿಕ ತನಿಖೆಯಿಂದ 4500/- ರೂ. ಹಣ ಪಡೆದಿರುವುದು ತಿಳಿದು ಬಂದಿರುತ್ತದೆ.

ವಾಹನದ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ವಾಹನ ವೈಟ್ ಬೋರ್ಡ್ ವಾಹನವಾಗಿದ್ದು ನಂಬರ್ ಪ್ಲೇಟ್ ಮೇಲೆ ಹಳದಿ ಬಣ್ಣದ ಬೋರ್ಡ್ ಹಾಕಿ ಬಾಡಿಗೆ ಮಾಡುತ್ತಿರುವುದು ಕಂಡು ಬಂದಿದ್ದು, ಆರೋಪಿ ತವಿನ್ ಕುಮಾರ್ ಮತ್ತು ವಾಹನ ಕೆಎ-12-ಪಿ-7631ರನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಠಾಣೆಯಲ್ಲಿ ಆರೋಪಿ ರವಿನ್ ಕುಮಾರ್ ಮೇಲೆ ಕಲಂ: 281 ಬಿಎನ್ಎಸ್ & 192(ಎ) ಐಎಂವಿ ಕಾಯ್ದೆ ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

What's Your Reaction?

Like Like 3
Dislike Dislike 2
Love Love 0
Funny Funny 0
Angry Angry 1
Sad Sad 3
Wow Wow 0