ಮಡಿಕೇರಿ: SIR ವಿರುದ್ಧ ಪ್ರತಿಭಟನೆ

Jul 8, 2026 - 17:57
 0  947
ಮಡಿಕೇರಿ: SIR ವಿರುದ್ಧ ಪ್ರತಿಭಟನೆ

ಮಡಿಕೇರಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಎಸ್‌ಐಆರ್‌ನಲ್ಲಿ ಅಗತ್ಯ ದಾಖಲೆಗಳಿಲ್ಲದ ಕಾರಣ ಜಿಲ್ಲೆಯ ಆದಿವಾಸಿ, ದಲಿತ ಮತ್ತು ಬಡ ಸಮುದಾಯದ ಸುಮಾರು 7 ಸಾವಿರ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಭೀತಿ ಇದೆ. ಇದನ್ನು ಖಂಡಿಸಿ ಸಿಐಟಿಯು, ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿ ಮತ್ತು ಕೃಷಿ ಕೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮತದಾನದ ಹಕ್ಕು ಉಳಿಸಿ" ಎಂಬ ಘೋಷಣೆ ಕೂಗಿದ ಪ್ರತಿಭಟನಾಕಾರರು, ಎಸ್‌ಐಆರ್ ಜನರನ್ನು ಮತದಿಂದ ಹೊರಗಿಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ಚುನಾವಣಾ ಆಯೋಗಕ್ಕೆ ಮತದಾರರ ಪೌರತ್ವ ಪ್ರಶ್ನಿಸುವ ಅಧಿಕಾರವಿಲ್ಲ. ಜೂ.30ರಿಂದ ಜು.29ರವರೆಗಿನ ಎಸ್‌ಐಆರ್‌ನಲ್ಲಿ ಹೆಸರು ಸೇರಿಸಲು ಆಧಾರ್, ಪಡಿತರ ಚೀಟಿ, ಜನ್ಮದಿನಾಂಕ ದಾಖಲೆ ಕಡ್ಡಾಯ. ಆದರೆ ಬಡವರು ಮತ್ತು ಆದಿವಾಸಿಗಳ ಬಳಿ ಇಂತಹ ದಾಖಲೆಗಳೇ ಇಲ್ಲ. ಜಿಲ್ಲಾಡಳಿತ ತಕ್ಷಣ ವಿಶೇಷ ಶಿಬಿರ ನಡೆಸಿ ಉಚಿತವಾಗಿ ದಾಖಲೆ ಒದಗಿಸಬೇಕು ಎಂದು ಒತ್ತಾಯಿಸಿದರು. ನಂತರ ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು

What's Your Reaction?

Like Like 1
Dislike Dislike 0
Love Love 3
Funny Funny 1
Angry Angry 0
Sad Sad 0
Wow Wow 1