ಮಡಿಕೇರಿ;ವೀರಭದ್ರ ಮುನೇಶ್ವರ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮ
ಮಡಿಕೇರಿ: ವೀರಭದ್ರ ಮುನೇಶ್ವರ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ವೀರಭದ್ರ ಮುನೇಶ್ವರ ದೇವಾಲಯದ ಗೌರವ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಬೆಳಿಗ್ಗೆ ೭ ಗಂಟೆಗೆ ಮಹಾಗಣಪತಿ ಹೋಮ, ೯ ಗಂಟೆಗೆ ಶ್ರೀ ವೀರಭದ್ರ ದೇವರ ಉತ್ಸವ ಮೂರ್ತಿಯ ನಗರ ಪ್ರದಕ್ಷಿಣೆಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಡೊಳ್ಳುಕುಣಿತ ಭಜನೆ ತಂಡ ಮುಂತಾದ ತಂಡಗಳು ಭಾಗವಹಿಸಲಿದೆ.
ಈ ಮೆರವಣಿಗೆಗೆ ದೇವಾಲಯದಿಂದ ಹೊರಟು ದಾಸವಾಳ ರಸ್ತೆಗಾಗಿ ಗಣಪತಿ ಬೀದಿಯಿಂದ ಬನ್ನಿಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ ಮಹಾದೇವಪೇಟೆಗಾಗಿ ಚೌಕಿ ವೃತ್ತದಿಂದ ಹಳೆ ಬಸ್ ನಿಲ್ದಾಣಕ್ಕಾಗಿ ಜೂನಿಯ್ರ್ ಕಾಲೇಜು ರಸ್ತೆಗಾಗಿ ಪುನಃ ದೇವಾಲಯಕ್ಕೆ ತಲುಪುತ್ತದೆ. ಮಧ್ಯಾಹ್ನ ೧ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸಂಜೆ ೬ ಗಂಟೆಗೆ ಮಹಾಮೃತ್ಯುಂಜಯ ಹೋಮವನ್ನು ಏರ್ಪಡಿಸಲಾಗಿದೆ.
ಮೃತ್ಯುಂಜಯ ಹೋಮಕ್ಕೆ ಹೆಸರು, ನಕ್ಷತ್ರ ನೋಂದಾಯಿಸುವವರು ಮೊ.ಸಂ. ೯೩೪೩೮೧೯೧೩೮ಗೆ ಸಂಪರ್ಕಿಸಬಹುದು ಎಂದು ಅವರು, ರಾತ್ರಿ ೯ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಲ್ಲದೇ ೯ ಗಂಟೆಯಿಂದ ೫ ಜಾಮ ಪೂಜೆ ನಡೆಸಲಾಗುವುದು. ಸಾರ್ವಜನಿಕರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯದ ಅಧ್ಯಕ್ಷ ಸುಕುಮಾರ್, ಉಪಾಧ್ಯಕ್ಷ ಚೇತನ್, ಪ್ರಧಾನ ಕಾರ್ಯದರ್ಶಿ ವಿಷ್ಣು, ಪ್ರಮುಖರಾದ ಕಮಲ್, ಸಂದೀಪ್ ಉಪಸ್ಥಿತರಿದ್ದರು.