ಮಡಿಕೇರಿ; ವಿಚಾರಣಾಧೀನ ಖೈದಿ ಸಾವು

ಮಡಿಕೇರಿ; ವಿಚಾರಣಾಧೀನ ಖೈದಿ ಸಾವು

ಮಡಿಕೇರಿ: ವಿಚಾರಣಾಧೀನ ಖೈದಿಯೊಬ್ಬರು 4 ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಕುಶಾಲನಗರ ನಿವಾಸಿ ಚಂಗಪ್ಪ (68) ಎಂಬವರೇ  ಮೃತಪಟ್ಟವರಾಗಿದ್ದಾರೆ.

ಪ್ರಕರಣವೊಂದರಲ್ಲಿ ಬಂದಿಸಲ್ಪಟ್ಟು ಮಡಿಕೇರಿ - ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಚಂಗಪ್ಪ, ಮಧುಮೇಹ ಮತ್ತು ರಕ್ತದ ಒತ್ತಡದಿಂದ ಬಳಲುತ್ತಿದ್ದರು. 3 ವರನ್ನು ತಾ.27 ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿತ್ತಾದರೂ ತಾ. 28ರ ರಾತ್ರಿ ಆಸ್ಪತ್ರೆಯಲ್ಲಿ 5 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಚಾರಣಾಧೀನ ಖೈದಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಈ ಕುರಿತು ಈ ಮಾಹಿತಿ ನೀಡಿದ್ದರುಂದ ನ್ಯಾಯಾಧೀಶರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ತೆ ಮೃತದೇಹವನ್ನು ಪರಿಶೀಲಿಸಿದರು. ಬಳಿಕ ಕಾನೂನು ಪ್ರಕ್ರಿಯೆ ನಡೆದ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.