ಶನಿವಾರ ಮದರಸ‌ ಪುನರಾರಂಭ ಮತ್ತು ಭಾನುವಾರ ಪ್ರವೇಶೋತ್ಸವ ಕಾರ್ಯಕ್ರಮ

Mar 27, 2026 - 12:34
 0  691
ಶನಿವಾರ ಮದರಸ‌ ಪುನರಾರಂಭ ಮತ್ತು ಭಾನುವಾರ ಪ್ರವೇಶೋತ್ಸವ ಕಾರ್ಯಕ್ರಮ

ವಿರಾಜಪೇಟೆ;ಸಮಸ್ತ ಕೇರಳ ಇಸ್ಲಾಂ ಮತ ವಿಧ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ಹನ್ನೊಂದು ಸಾವಿರಕ್ಕೂ ಅದಿಕ ಮದರಸಗಳ ಪೈಕಿ ದಾರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಕಲ್ಲುಬಾಣೆ ಕೂಡ ಒಂದಾಗಿದೆ. ರಂಝಾನ್ ಕಳೆದು ಶನಿವಾರ ಪುನಾರಾರಂಭ ಮತ್ತು ಭಾನುವಾರ ಪ್ರವೇಶೋತ್ಸವ ಕಾರ್ಯಕ್ರಮ ಕಲ್ಲುಬಾಣೆ ದಾರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದಲ್ಲಿ ಭಾನುವಾರ ಬೆಳಿಗ್ಗೆ ಜಮಾಅತ್ ಅದ್ಯಕ್ಷರಾದ ಅಫ್ಸಲ್ ಪಿಕೆ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

 ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಉಪಾದ್ಯಕ್ಷರಾದ ಪಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಮಾಅತಿನ ಪದಾಧಿಕಾರಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 ಪ್ರಸಕ್ತ ವರುಷದಲ್ಲಿ 4 ನೇ ತರಗತಿಯಿಂದ 8 ನೇ ತರಗತಿಗಳಿಗೆ ಪಠ್ಯ ಪುಸ್ತಕ ಬದಲಾವಣೆಯಾಗಿರುವುದು ಎರಡು ಪುಸ್ತಕಗಳು ಕನ್ನಡ ದಲ್ಲಿ ಹೊರತಂದಿರುವುದು ವಿಶೇಷತೆಯಾಗಿದೆ "ದೇಶ ಪ್ರೇಮ ಮತ್ತು "ಡಿಜಿಟಲ್ ಕಾಲದ ಮಕ್ಕಳು" . "ಸಮಯ ಪ್ರಜ್ಞೆ ಯಶಸ್ಸಿನ ಮುನ್ನುಡಿ" ಹೀಗೆ ವಿವಿಧ ತರಗತಿಗಳಿಗೆ ಸಮಕಾಲೀನ ವಾಗಿ ಸಮಸ್ತ ಪಠ್ಯ ಪುಸ್ತಕ ಹೊರತಂದಿದೆ ಈ ನಿಟ್ಟಿನಲ್ಲಿ ವೈವಿಧ್ಯಮಯ ತರಗತಿಗಳೊಂದಿಗೆ ವಿದ್ಯಾರ್ಥಿಗಳ ಸುಂದರ ನಾಳೆಗಾಗಿ ಮದರಸಗಳು ಕಾರ್ಯಚರಿಸಲಿದೆ ಎಂದು ನೂತನವಾಗಿ ಆಯ್ಕೆಯಾದ ಪ್ರಾಂಶುಪಾಲರಾದ ಎಂ ತಮ್ಲೀಖ್ ದಾರಿಮಿ ಮಡಿಕೇರಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0