5.25 ಕೋಟಿ ರೂಪಾಯಿ ವಿಮೆ ಹಣ ದೋಚಲು ವ್ಯಕ್ತಿಯ ಕೊಲೆ: ಆರು ಮಂದಿ ಬಂಧನ

5.25 ಕೋಟಿ ರೂಪಾಯಿ ವಿಮೆ ಹಣ ದೋಚಲು ವ್ಯಕ್ತಿಯ ಕೊಲೆ: ಆರು ಮಂದಿ ಬಂಧನ
Gangadhar | IANS : photo credit: free press journal

ಹೊಸಪೇಟೆ (ವಿಜಯನಗರ): ಅಪಘಾತ ವಿಮೆ ಹಣ ದೋಚುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ, ಅದನ್ನು ಬೈಕ್ ಅಪಘಾತವೆಂದು ರೂಪಿಸಿರುವ ಘಟನೆ ಹೊಸಪೇಟೆಯಲ್ಲಿ ಬೆಳಕಿಗೆ ಬಂದಿದೆ.

 ಈ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಸೆಪ್ಟೆಂಬರ್ 28ರಂದು ನಗರದ ಕೌಲ್‌ಪೇಟೆ ನಿವಾಸಿ ಕೆ. ಗಂಗಾಧರ ಎಚ್‌ಎಲ್‌ಸಿ ಕಾಲುವೆಯ ಬಳಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಮೊದಲು ವರದಿಯಾಗಿತ್ತು. ಮೃತರ ಪತ್ನಿ ಶಾರದಮ್ಮ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಮೂವರು ತಂಡಗಳನ್ನು ರಚಿಸಿ ತನಿಖೆ ಕೈಗೊಂಡರು. ಆ ತನಿಖೆಯಲ್ಲಿ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗವಾಯಿತು.

ಪೊಲೀಸರ ಮಾಹಿತಿ ಪ್ರಕಾರ, ಗಂಗಾಧರ ತೀವ್ರ ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು, ಅವರ ಹೆಸರಿನಲ್ಲಿ ಮತ್ತೊಬ್ಬ ಮಹಿಳೆಯನ್ನು ಪತ್ನಿ ಎಂದು ತೋರಿಸಿ ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು. ನಂತರ ಗಂಗಾಧರನ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ನಕಲಿ ನಾಮಿನಿ ಸೃಷ್ಟಿಸಲಾಗಿತ್ತು.

ಇದೇ ವೇಳೆ, ವಿವಿಧ ವಿಮಾ ಕಂಪನಿಗಳಲ್ಲಿ ಒಟ್ಟು ₹5.25 ಕೋಟಿ ಮೌಲ್ಯದ ಅಪಘಾತ ಹಾಗೂ ಇತರೆ ವಿಮಾ ಪಾಲಿಸಿಗಳನ್ನು ಮಾಡಿಸಿ, ಅದರ ಪ್ರೀಮಿಯಂ ಮೊತ್ತವನ್ನೂ ಆರೋಪಿಗಳೇ ಪಾವತಿಸಿದ್ದರು. ಆದರೆ ಗಂಗಾಧರ ನಿರೀಕ್ಷಿತ ಅವಧಿಯಲ್ಲಿ ಸಾವನ್ನಪ್ಪದ ಕಾರಣ ಕೆಲವು ಪಾಲಿಸಿಗಳು ತಿರಸ್ಕೃತವಾಗಿದ್ದವು. ಇದರಿಂದ ಕೋಪಗೊಂಡ ಆರೋಪಿಗಳು, ವಿಮಾ ಹಣ ಪಡೆಯುವ ಉದ್ದೇಶದಿಂದ ಗಂಗಾಧರನನ್ನು ಕೊಲೆ ಮಾಡಿ, ಅದು ಅಪಘಾತವೆಂದು ತೋರಿಸುವ ಮೂಲಕ ದುಡ್ಡು ದೋಚಲು ಪ್ರಯತ್ನಿಸಿದ್ದರು ಎಂದು ಎಸ್. ಜಾಹ್ನವಿ ವಿವರಿಸಿದರು.

ಘಟನೆಯಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮುಂದುವರೆಸಿದ್ದಾರೆ.