ಶನಿವಾರ ಗೋಣಿಕೊಪ್ಪಲಿನಲ್ಲಿ ಮಾಧ್ಯಮ ಸ್ಪಂದನದಿಂದ ಬೃಹತ್ ರಕ್ತದಾನ ‌ಶಿಬಿರ:ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

Nov 27, 2025 - 10:39
 0  213
ಶನಿವಾರ ಗೋಣಿಕೊಪ್ಪಲಿನಲ್ಲಿ ಮಾಧ್ಯಮ ಸ್ಪಂದನದಿಂದ ಬೃಹತ್ ರಕ್ತದಾನ ‌ಶಿಬಿರ:ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಮಡಿಕೇರಿ: ಮಾಧ್ಯಮ‌ ಸ್ಪಂದನ, ರಕ್ತನಿಧಿ ಕೇಂದ್ರ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಪೊನ್ನಂಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ,ರೋಟರಿ,ಗೋಣಿಕೊಪ್ಪಲು ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನವೆಂಬರ್ 29ರ ಶನಿವಾರ ಗೋಣಿಕೊಪ್ಪಲಿ ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಬೆಳಗ್ಗೆ 10.30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧ್ಯಮ ಸ್ಪಂದನ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ವಹಿಸಲಿದ್ದಾರೆ.

ಉದ್ಘಾಟನೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು,ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎಎಸ್ ಪೊನ್ನಣ್ಣ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಗೋಣಿಕೊಪ್ಪ ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷ ಕೊಟ್ಟಂಗಡ ವಿಜು ದೇವಯ್ಯ,ರೋಟರಿ ಗೋಣಿಕೊಪ್ಪ ಪ್ರಮುಖ ಪಿ.ಆರ್ ವಿಜಯ, ಉಮಾಮಹೇಶ್ವರಿ ದೇವಾಸ್ಥನ ಸಮಿತಿಯ ಜಪ್ಪೆಕೋಡಿ ರಾಜ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಬಿ‌.ಆರ್ ಸವಿತಾ ರೈ,ಉದ್ಯಮಿ ಬಿ.ಎಂ ಪ್ರಕಾಶ್, ಡಾ.ಕೆ.ಪಿ ಕರುಂಬಯ್ಯ,ಪೊನ್ನಂಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕ ವಿವಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಸನ್ಮಾನ: ಮಾಧ್ಯಮ ಸ್ಪಂದನದಿಂದ ನಡೆಯುವ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕುಲ್ಲಚಂಡ ಪ್ರಮೋದ್ ಗಣಪತಿ (ರಕ್ತದಾನ),ಚೋಕಂಡ ಸಂಜು‌ ಸುಬ್ಬಯ್ಯ(ವೈದ್ಯಕೀಯ ಸೇವೆ),ವಿ.ವಿ ಅರುಣ್ ಕುಮಾರ್ (ರಕ್ತದಾನ),ಸಂತೋಷ್ ರೈ (ವೈದ್ಯಕೀಯ ಸೇವೆ), ಗೌರಿ ರಾಜ (ಸ್ವಚ್ಛತೆ)

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0