ಕಸ್ತೂರಿ ರಂಗನ್ ವರದಿ ವಿರೋಧಿಸಿ ಸೆ.11 ರಂದು ಬೃಹತ್ ಪ್ರತಿಭಟನೆ
ಮಡಿಕೇರಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಸೆ.11 ರಂದು ಕೊಡಗಿನಲ್ಲಿ 20 ಸಾವಿರಕ್ಕೂ ಅಧಿಕ ರೈತರು ಬೀದಿಗಿಳಿಯಲಿದ್ದಾರೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದರು.
ಪರಿಸರ ಸೂಕ್ಷ್ಮ ವಲಯದಿಂದ ಜಿಲ್ಲೆಯ 53 ಜನವಸತಿ ಗ್ರಾಮಗಳನ್ನು ಕೈಬಿಡಬೇಕು, 1 ಕಿ.ಮೀ. ಬಫರ್ ಝೋನ್ ರದ್ದುಪಡಿಸಬೇಕು ಎಂದು ಆಗ್ರಹಿಸಿ, ಬೆಳಗ್ಗೆ 11ಕ್ಕೆ ಸುದರ್ಶನ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಬಳಿಕ ಗಾಂಧಿ ಮೈದಾನದಲ್ಲಿ ಸಭೆ ನಡೆಯಲಿದೆ ಎಂದರು.ಬ್ರಿಟಿಷ್ ಕಾಲದ ಸೆಕ್ಷನ್ 4 ಇಟ್ಟುಕೊಂಡು ರೈತರಿಗೆ ಕಿರುಕುಳ ನೀಡಲಾಗುತ್ತಿದೆ, ಮುಕ್ಕೊಡ್ಲು ರೈತನ ತೋಟ ನಾಶ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮವಾಗಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕರಾದ ದರ್ಶನ್, ಮಧು ಬೋಪಣ್ಣ , ರತೀಶ್ ಮಂದಣ್ಣ, ಲೋಕೇಶ್, ಸಂಗಮ್ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
