ಸಂಭ್ರಮದ ಹಬ್ಬವಾದ ದಸರಾ ಸವ೯ರ ಒಗ್ಗೂಡಿವಿಕೆಗೆ ಕಾರಣವಾಗಲಿ : ಆರ್. ಐಶ್ವಯ೯

ಸಂಭ್ರಮದ  ಹಬ್ಬವಾದ ದಸರಾ ಸವ೯ರ ಒಗ್ಗೂಡಿವಿಕೆಗೆ ಕಾರಣವಾಗಲಿ : ಆರ್. ಐಶ್ವಯ೯

ಮಡಿಕೇರಿ : ದಸರಾ ಎಂಬುದೇ ಸಂಭ್ರಮಕ್ಕೆ ಸಂಕೇತವಾಗಿರುವ ಸಂಭ್ರಮದ ಉತ್ಸವವಾಗಿದ್ದು ನಾಡಹಬ್ಬವನ್ನು ಸಂತೋಷದಿಂದ ಎಲ್ಲರೂ ಒಗ್ಗೂಡಿ ಆಚರಿಸಿದರೆ ಈ ಹಬ್ಬ ಅಥ೯ಪೂಣ೯ವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವಯ೯ ಕರೆ ನೀಡಿದ್ದಾರೆ.

 ನಗರದ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಆಯೋಜಿತ ಮೂರನೇ ದಿನದ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ವೇದಿಕೆಯಲ್ಲಿ ಮಾತನಾಡಿದ ಆರ್. ಐಶ್ವಯ೯, ದಸರಾ ಸಂದಭ೯ ದಶದಿನಗಳ ಕಾಲ ಸಾಂಸ್ಕೖತಿಕ ತೇರು ಸಂಭ್ರಮದಿಂದ ನಡೆಯುತ್ತದೆ. ಸ್ತ್ರೀಶಕ್ತಿಯನ್ನು ವಿಜೖಂಭಿಸುವ ಉತ್ಸವವಾಗಿ ದಸರಾ ಕಂಗೊಳಿಸುತ್ತದೆ. ವಿವಿಧ ಅವತಾರಗಳಲ್ಲಿ ಕಂಗೊಳಿಸುವ ಶಕ್ತಿರೂಪಿಣಿ ಸ್ತ್ರೀಶಕ್ತಿಗೆ ನಮಿಸುವ ಅವಕಾಶ ದಸರಾದಲ್ಲಿ ದೊರಕಲಿದೆ ಎಂದೂ ಅವರು ಹೇಳಿದರು. ಮಡಿಕೇರಿ ದಸರಾವನ್ನು ಬಹಳ ಸುಂದರವಾಗಿ ಆಯೋಜಿಸಲಾಗಿದೆ ಎಂದೂ ಅವರು ಶ್ಲಾಘಿಸಿದರು.

ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ದಸರಾ ಈ ವಷ೯ ಸೆಪ್ಟೆಂಬರ್ ನಲ್ಲಿಯೇ ಬಂದಿರುವುದರಿಂದಾಗಿ ಮಳೆಯ ಸವಾಲನ್ನೂ ಎದುರಿಸಬೇಕಾಗಿದೆ. ಶೋಭಾಯಾತ್ರೆಗೆ ಯಾವುದೇ ಸಮಸ್ಯೆಯಾಗದಂತೆ ಮಳೆಯ ಆಭ೯ಟ ಕಡಮೆಯಾಗಲಿ ಎಂದೂ ಅವರು ಹಾರೈಸಿದರು.

ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ. ಜಗದೀಶ್ ಮಾತನಾಡಿ, ಮಳೆಯಿಂದಾಗಿ ದಶಮಂಟಪಗಳ ತಯಾರಿ ಬಹಳ ಕಷ್ಟಸಾಧ್ಯವಾಗುತ್ತಿದೆ. ಮಂಟಪಗಳ ತಯಾರಿ ಮಳೆಯಿಂದಾಗಿ ಬಹಳ ನಿಧಾನಗತಿಯಲ್ಲಿ ಸಾಗಿದ್ದು, ಶೋಭಾಯಾತ್ರೆಗೆ ವರುಣನ ಅವಕೖಪೆಯಿಲ್ಲದಂತೆ ದೇವಾನುದೇವತೆಯರು ಹಾರೈಸಬೇಕೆಂದು ಪ್ರಾಥಿ೯ಸಿದರು. ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಹಾಜರಿದ್ದರು.

ಎಸ್.ಪಿ.ಬಿ.ಗೆ ಗಾನನಮನ;

ಮೂರನೇ ದಿನದ ದಸರಾ ಸಾಂಸ್ಕೖತಿಕ ಕಾಯ೯ಕ್ರಮದಲ್ಲಿ ಹೆಸರಾಂತ ಗಾಯಕ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅವರ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಪುಪ್ಪ ನಮನ ಮತ್ತ ಗಾನ ಮನವನನ್ನು ಕೂಗ್೯ ಸನ್ ರೈಸ್ ಮೇಲೋಡಿಸ್ ತಂಡದಿಂದ ಸಲ್ಲಿಸಲಾಯಿತು. ರವಿ ನೇತೖತ್ವದ ಈ ತಂಡ ಎಸ್.ಪಿ.ಬಿ ಅವರ ಜನಪ್ರಿಯ ಗೀತಗಳನ್ನು ಹಾಡಿ ರಂಜಿಸಿತು.

 ಮಂಗಳೂರಿನ ಜ್ಞಾನ ಐತಾಳ್ ತಂಡದ ಹಾಡು, ನೖತ್ಯಕ್ಕೆ ಪ್ರೇಕ್ಷಕರು ಮನಸೋತರೆ, ಸುಳ್ಯದ ಸುಗಿಪು ತಂಡದಿಂದ ಅಯೋಧ್ಯೆಯ ಬಾಲರಾಮನ ಮೂತಿ೯ ಶಿಲ್ಪಿ ಅರುಣ್ ಯೋಗಿರಾಜ್ ಕುರಿತ ನೖತ್ಯರೂಪಕ ವಿನೂತನ ರೀತಿಯಿಂದಾಗಿ ಗಮನ ಸಳೆಯಿತು.

ಮಡಿಕೇರಿ ಬಾಲಕರ ಬಾಲಮಂದಿರದ ವಿದ್ಯಾಥಿ೯ಗಳು ಶಿವತಾಂಡವ ನೖತ್ಯ ಮಾಡಿದರೆ, ನಾಪೋಕ್ಲುವಿನ ಓಂಕಾರ್ ತಂಡದ ರಸಮಂಜರಿ ಕೂಡ ದಿನದ ಕಾಯ೯ಕ್ರಮಗಳಲ್ಲಿನ ಆಕಷ೯ಣೆಯಾಗಿತ್ತು.

ಮಡಿಕೇರಿ ದಸರಾ ಬ್ರಾಂಡ್ ಆಗಬೇಕಾಗಿದೆ:

ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, 160 ವಷ೯ಗಳ ಇತಿಹಾಸವಿರುವ ಮಡಿಕೇರಿ ದಸರಾದಲ್ಲಿ ಕರಗೋತ್ಸವ, ದಶಮಂಟಪಗಳ ಶೋಭಾಯಾತ್ರೆ, ಸಾಂಸ್ಕೖತಿಕ, ಕ್ರೀಡೆ, ಕವಿಗೋಷ್ಟಿ, ಮಕ್ಕಳ ದಸರಾ, ಯುವದಸರಾ, ಜಾನಪದ ದಸರಾ, ಕಾಫಿ ದಸರಾ, ಮಹಿಳಾ ದಸರಾ ಸೇರಿದಂತೆ ಸಾಕಷ್ಟ ವೈವಿಧ್ಯತೆಗಳದ್ದರೂ ರಾಜ್ಯವ್ಯಾಪಿ ನಿರೀಕ್ಷಿತ ಪ್ರಚಾರ ಸಿಕ್ಕುತ್ತಿಲ್ಲ. ಮಡಿಕೇರಿ ದಸರಾ ಬ್ರಾಂಡ್ ಆಗಲೇಇಲ್ಲ. ಮಡಿಕೇರಿ ದಸರಾವನ್ನು ಕೂಡ ಬ್ರಾಂಡ್ ರೂಪದಲ್ಲಿ ಗಮನಿಸುವಂತಾದರೆ ಪ್ರಾಯೋಜಕತ್ವವು ಸುಲಭ ಸಾಧ್ಯವಾಗಿ ಸಕಾ೯ರ ನೀಡುವ ಅತ್ಯಲ್ಪ ಅನುದಾನಕ್ಕಾಗಿ ಕೈಯೊಡ್ಡುವ ಪರಿಸ್ಥಿತಿ ಬರಲಾರದು ಎಂದು ಅಭಿಪ್ರಾಯಪಟ್ಟರು. ಮಡಿಕೇರಿಯಿಂದ ಹೊರತಾಗಿ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ದಸರಾ ಬಗ್ಗೆ ಹೆಚ್ಚಿನ ಪ್ರಚಾರವಾದರೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾ ಕಾಯ೯ಕ್ರಮಗಳಿಗೆ ಬರುತ್ತಾರೆ ಎಂದೂ ಅನಿಲ್ ಹೇಳಿದರು.