ವಯಕೋಲ್ ಮಸ್ಜಿದುಲ್ ರಹ್ಮಾನ್ ಮತ್ತು ರೌಳತುಲ್ ಉಲೂಂ ಆಶ್ರಯದಲ್ಲಿ ಮೀಲಾದುನ್ನಬಿ ಸಮಾವೇಶ
admincoorgdaily

ಮಡಿಕೇರಿ: ನಾಪೋಕ್ಲು ಸಮೀಪದ ಕುಂಜಿಲ ವಯಕೋಲ್ ಮಸ್ಜಿದುಲ್ ರಹ್ಮಾನ್ ಹಾಗೂ ರೌಳತುಲ್ ಉಲೂಂ ಆಶ್ರಯದಲ್ಲಿ ಪವಿತ್ರ ಮೀಲಾದುನ್ನಬಿ ಸಮಾವೇಶವು ವಯಕೋಲ್ ಮದ್ರಸ ಅಂಗಣದಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದ ಧ್ವಜಾರೋಹಣವನ್ನು ಅಹ್ಮದ್ ಹಾಜಿ ನೆರವೇರಿಸಿದರು.
ನಿಝಾರ್ ಅಹ್ಸನಿ ಮುದರ್ರಿಸ್ ಕುಂಜಿಲ ಅವರು ಪ್ರಾರ್ಥನೆ ನೆರವೇರಿಸಿದರು. ನಾಸಿರ್ ಲತೀಫಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬು ವಯಕೋಲ್ ಅವರು ಸ್ವಾಗತ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಫಾ ಮುಹಮ್ಮದ್, ಮುಸ್ತಾಫಾ ಬಾರಿಕೆ, ಶರೀಫ್, ಮುಸ್ತು, ನಾಸಿರ್ ಮಕ್ಕಿ, ಮೂಸಾ, ರಶೀದ್, ಸಿಯಾಬ್, ನಿಸಾರ್, ಉಸ್ಮಾನ್, ಮೊಯ್ದು, ಆಲಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಮದ್ರಸ ಅಧ್ಯಾಪಕರಾದ ರಫೀಖ್ ಅಝ್ಹರಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಹಿರಿಯರು, ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಮಾವೇಶದ ಅಂಗವಾಗಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಿರಿಯರಿಂದ ಮದ್ಹ್ ಗೀತೆಗಳು ಹಾಗೂ ದಫ್ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದವರಿಗೆ ತಬರ್ರುಖ್ ವಿತರಿಸಲಾಯಿತು. ಮೀಲಾದುನ್ನಬಿ ಸಮಾವೇಶವು ಧಾರ್ಮಿಕ ಭಾವನೆ ಹಾಗೂ ಸೌಹಾರ್ದತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.