ಇನ್‌ಸ್ಟಾಗ್ರಾಂ ಮೂಲಕ ಅಪ್ರಾಪ್ತೆಯ ಪರಿಚಯ; ಪುಸುಲಾಯಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಯುವಕರು : ಗರ್ಭಿಣಿಯಾಗುತ್ತಿದ್ದಂತೆ ಪ್ರಕರಣ ಬಯಲು; ಪೊಸ್ಕೊ ಕೇಸು ದಾಖಲು

Oct 25, 2025 - 17:32
 0  1.7k
ಇನ್‌ಸ್ಟಾಗ್ರಾಂ ಮೂಲಕ ಅಪ್ರಾಪ್ತೆಯ ಪರಿಚಯ; ಪುಸುಲಾಯಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಯುವಕರು  : ಗರ್ಭಿಣಿಯಾಗುತ್ತಿದ್ದಂತೆ ಪ್ರಕರಣ ಬಯಲು; ಪೊಸ್ಕೊ ಕೇಸು ದಾಖಲು
Instagram logo

ಹಾವೇರಿ: ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಬೆಳೆಸಿಕೊಂಡ ಅಪ್ರಾಪ್ತೆಯೊಬ್ಬಳ ಮೇಲೆ ಮೂವರು ಯುವಕರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ಉದಯ್ ಕರಿಯಣ್ಣನವರ, ಕಿಶನ್ ವಡ್ಡರ್, ಆಕಾಶ್ ಮಂತಗಿ ಮತ್ತು ಚಂದ್ರು ಗೊಲ್ಲರ ಎಂದು ತಿಳಿದು ಬಂದಿದೆ. 

ಪ್ರಮುಖ ಆರೋಪಿ ಉದಯ್ ಕಳೆದ ಮಾರ್ಚ್ ತಿಂಗಳಲ್ಲಿ ಇನ್‌ಸ್ಟಾಗ್ರಾಂ ಮೂಲಕ ಬಾಲಕಿಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ. ನಂತರ ಆಕೆಯ ವಿಶ್ವಾಸ ಗಳಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ತನ್ನ ಸ್ನೇಹಿತರಾದ ಕಿಶನ್, ಆಕಾಶ್ ಹಾಗೂ ಚಂದ್ರು ಅವರನ್ನು ಪರಿಚಯಿಸಿ, ಏಪ್ರಿಲ್ ತಿಂಗಳಲ್ಲಿ ಎಲ್ಲರೂ ಸೇರಿಕೊಂಡು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಕೆಲ ತಿಂಗಳ ಬಳಿಕ ಬಾಲಕಿ ಗರ್ಭಿಣಿಯಾಗಿರುವುದು ಪತ್ತೆಯಾಗುತ್ತಿದ್ದಂತೆಯೇ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬದವರು ನೀಡಿದ ದೂರು ಆಧರಿಸಿ ಪೊಸ್ಕೊ (POCSO) ಕಾಯ್ದೆಯಡಿ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಆರೋಪಿಗಳ ವಿರುದ್ಧ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

What's Your Reaction?

Like Like 0
Dislike Dislike 3
Love Love 2
Funny Funny 0
Angry Angry 2
Sad Sad 2
Wow Wow 0