ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ತೆರಳಿದ ಯುವತಿ ನಾಪತ್ತೆ ಪ್ರಕರಣ;ಶಾಸಕ ಎಎಸ್ ಪೊನ್ನಣ್ಣ ಅವರನ್ನು ಭೇಟಿಯಾದ ಶರಣ್ಯ ಕುಟುಂಬಸ್ಥರು
admincoorgdaily

ಮಡಿಕೇರಿ;ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗೆಗ್ಗೆ ತೆರಳಿದ್ದ ನಾಪತ್ತೆಯಾದ ಕೇರಳದ ಯುವತಿಯ ಕುಟುಂಬದವರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಅವರನ್ನ ಭೇಟಿ ಮಾಡಿದ್ದಾರೆ.
ಕಾರ್ಯಚರಣೆ ಚುರುಕುಗೊಳಿಸಲು ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಎ ಎಸ್ ಪೊನ್ನಣ್ಣ ಸೂಚನೆ ನೀಡಿದ್ದು, ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ರಾಜ್ಯದ ಕೊಯಿಕೊಡು ನಾದಾಪುರಂ ಗ್ರಾಮದ ಶರಣ್ಯಳಿಗಾಗಿ, ಡ್ರೋನ್ ಕ್ಯಾಮೆರಾ ಸ್ವಾನದಳದೊಂದಿಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯ 4ತಂಡಗಳಿಂದ ಬಿರುಸಿನ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮೊಬೈಲ್ ಸಿಮ್ ಟ್ರ್ಯಾಕಿಂಗ್ ಲೊಕೇಶನ್ ಮೂಲಕವೂ ಹುಡುಕಾಟ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ಶೋಧ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು, ತಡಿಯಂಡಮೋಳ್ ಬೆಟ್ಟಕ್ಕೆ ಆಗಮಿಸಿದ ANF ತಂಡ ಕೂಡ ಆಗಮಿಸಿದೆ.