ಸಮಸ್ತ ಶತಮಾನೋತ್ಸವದ ಪ್ರಯುಕ್ತ ಮುಅಲ್ಲಿಂ ಭವನ ಯೋಜನೆ:-ಕೊಳಕೇರಿಯಲ್ಲಿ ನಾಲ್ಕನೇ ಮನೆ ನಿರ್ಮಾಣಕ್ಕೆ ಶಂಕು ಸ್ಥಾಪನೆ

Aug 20, 2026 - 09:52
 0  46
ಸಮಸ್ತ ಶತಮಾನೋತ್ಸವದ ಪ್ರಯುಕ್ತ ಮುಅಲ್ಲಿಂ ಭವನ ಯೋಜನೆ:-ಕೊಳಕೇರಿಯಲ್ಲಿ ನಾಲ್ಕನೇ ಮನೆ ನಿರ್ಮಾಣಕ್ಕೆ ಶಂಕು ಸ್ಥಾಪನೆ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ಸಮಸ್ತ ಶತಮಾನೋತ್ಸವ ಆಚರಣೆಯ ಅಂಗವಾಗಿ ಮುಅಲ್ಲಿಂಗಳಿಗೆ ನಿರ್ಮಿಸಿಕೊಡಲಾಗುತ್ತಿರುವ 'ಮುಅಲ್ಲಿಮ್ ಭವನ' ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಗೆ ಮಂಜೂರಾದ ಮನೆಗಳಲ್ಲಿ ನಾಲ್ಕನೇ ಮನೆಯ ಶಂಕುಸ್ಥಾಪನಾ ಕಾರ್ಯಕ್ರಮವು ನಾಪೋಕ್ಲು ಸಮೀಪದ ಕೊಳಕೇರಿಯಲ್ಲಿ ನಡೆಯಿತು.

ಕೊಳಕೇರಿಯ ​ದಾರುಲ್ ಇಸ್ಲಾಂ ಮದ್ರಸ ಮುಅಲ್ಲಿಮರಾದ ಹಮೀದ್ ಮುಸ್ಲಿಯಾರ್ ಅವರಿಗೆ ಲಭಿಸಿದ ಈ ನೂತನ ಮನೆಯ ನಿರ್ಮಾಣ ಕಾರ್ಯಕ್ಕೆ ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಹರಿ ಶಂಕುಸ್ಥಾಪನೆ ನೆರವೇರಿಸಿದರು. ​ಈ ಸಂದರ್ಭ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಕೊಡಗು ಜಿಲ್ಲಾಧ್ಯಕ್ಷರಾದ ಅಬ್ದುಲ್ಲಾ ಸಖಾಫಿ ಕೊಳಕೇರಿ, ಹಾಗೂ ಇತರ ಸಾಂಘಿಕ ಮುಖಂಡರು ಮತ್ತು ಜಮಾಅತ್ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0