ಮೇ 15ರಂದು ರಾಜಾಸೀಟ್ ನಲ್ಲಿ ಕೋವಿ ಮತ್ತು ಕೊಳಲು” ಚಿತ್ರದ ಮುಹೂರ್ತ

May 13, 2026 - 16:55
 0  265
ಮೇ 15ರಂದು ರಾಜಾಸೀಟ್ ನಲ್ಲಿ ಕೋವಿ ಮತ್ತು ಕೊಳಲು” ಚಿತ್ರದ ಮುಹೂರ್ತ

ಮಡಿಕೇರಿ: ಎಂಪೀರಿಯಾ ಎಂಟರ್‌ಟೈನ್‌ಮೆಂಟ್ ನಿರ್ಮಾಣದ “ಕೋವಿ ಮತ್ತು ಕೊಳಲು” ಚಿತ್ರದ ಮುಹೂರ್ತ ಮೇ 15ರಂದು ಬೆಳಗ್ಗೆ 9.15ಕ್ಕೆ ರಾಜಾಸೀಟ್‌ನಲ್ಲಿ ನಡೆಯಲಿದೆ ಎಂದು ನಿರ್ದೇಶಕ ಬಾಸುಮ ಕೊಡಗು ತಿಳಿಸಿದರು.

 ಗುರುರಾಜ ಮಾರ್ಪಳ್ಳಿಯವರ ‘ಗರ್ಭ’ ಕಾದಂಬರಿ ಆಧಾರಿತ ಚಿತ್ರವು ಕಲೆ-ಹಣದ ಸಂಘರ್ಷ ಕಥೆ ಹೊಂದಿದೆ. ಶೌರ್ಯತೇಜ ಚಿತ್ರಕಥೆ, ದೃಶಾ ಕೊಡಗು ಛಾಯಾಗ್ರಹಣ ಮಾಡಿದ್ದಾರೆ. ಅಕ್ಷತಾ ಪಾಂಡವಪುರ, ನವೀನ್ ಪಡೀಲ್, ಮೋಹನ್ ಶೇಣಿ, ಡಿಂಗ್ರಿ ನರೇಶ್ ಅಭಿನಯಿಸಲಿದ್ದು, ಮಾನ್ಯ ಕುಮಾರ್ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.

ಮಡಿಕೇರಿಯಿಂದ ಜಾಲ್ಸೂರುವರೆಗೆ ಚಿತ್ರೀಕರಣ ನಡೆಯಲಿದೆ. ಹೇಮಂತ್ ಕುಲಾಲ್, ನಿಶಾನ್ ಭಂಡಾರಿ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಲೋಕೇಶ್ ಊರುಬೈಲು, ಬಿ.ಡಿ.ಕುಮಾರ್, ಶೌರ್ಯತೇಜ, ತ್ರಿಶಾಂಕ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0