ವಿರಾಜಪೇಟೆ; ಪೀಠೋಪಕರಣ ತಯಾರಕರ ಹಾಗೂ ಕಾರ್ಮಿಕರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಸಿ. ವಿಜಯಕುಮಾರ್ ಆಯ್ಕೆ

Jul 14, 2026 - 18:44
 0  712
ವಿರಾಜಪೇಟೆ; ಪೀಠೋಪಕರಣ ತಯಾರಕರ ಹಾಗೂ ಕಾರ್ಮಿಕರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಸಿ. ವಿಜಯಕುಮಾರ್ ಆಯ್ಕೆ

ವಿರಾಜಪೇಟೆ:ವಿರಾಜಪೇಟೆ ಪೀಠೋಪಕರಣ ತಯಾರಿಕೆಯ ಮಾಲೀಕರು ಹಾಗೂ ಕಾರ್ಮಿಕರ ಸಂಘದ ಮಹಾಸಭೆಯು ಇತ್ತೀಚೆಗೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಸ್ವಾಗತ್ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.

ಸಭೆಯಲ್ಲಿ ಸಂಘದ ನೂತನ ಸಾಲಿನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಎನ್.ಸಿ. ವಿಜಯಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಎನ್.ಸಿ. ವಿಜಯಕುಮಾರ್ ಅವರು, "ಸಂಘದ ಸದಸ್ಯರು ಮತ್ತು ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಲು ಹಾಗೂ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಲು ಈ ಸಂಘವು ಉತ್ತಮ ವೇದಿಕೆಯಾಗಿದೆ.ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು," ಎಂದು ತಿಳಿಸಿದರು.

ಸಭೆಯಲ್ಲಿ ಸರ್ವಸಮ್ಮತಿಯಿಂದ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಎನ್.ಸಿ. ವಿಜಯಕುಮಾರ್, ಉಪಾಧ್ಯಕ್ಷರಾಗಿ ಎನ್. ಸುರೇಶ್ ಕುಮಾರ್, ಕಾರ್ಯದರ್ಶಿಯಾಗಿ ನಂದ ಉತ್ತಯ್ಯ, ಸಹ ಕಾರ್ಯದರ್ಶಿ ಮಹಾದೇವ ಆಚಾರ್ಯ, ಖಜಾಂಚಿ ಸಿದ್ದರಾಜು ಆಯ್ಕೆಗೊಂಡರು.

ಮಹಾಸಭೆಯಲ್ಲಿ ಸಂಘದ ಪ್ರಮುಖ ಸದಸ್ಯರಾದ ದಾಮೋದರ ಆಚಾರ್ಯ, ಪ್ರಭಾಕರ್, ಸಿಜು, ಗಂಗಾಧರ್, ರವೀಂದ್ರ, ಶಶಿಧರ, ಮೋಹನ್, ಪ್ರವೀಣ್, ಹರಿದಾಸ ಸೇರಿದಂತೆ ಸಂಘದ ಪೀಠೋಪಕರಣ ಘಟಕದ ಹಲವಾರು ಮಾಲೀಕರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0