ನಾಪೋಕ್ಲು: ಕೊಳಕೇರಿ ಗ್ರಾಮದ ತೋಟದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ: ಉರಗ ತಜ್ಞ ಸ್ನೇಕ್ ಪ್ರಜ್ವಲ್ ನಿಂದ ರಕ್ಷಣೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ತೋಟವೊಂದರಲ್ಲಿ ಕಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಮೂರ್ನಾಡುವಿನ ಉರಗತಜ್ಞ ಸ್ನೇಕ್ ಪ್ರಜ್ವಲ್ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಬೆಳೆಗಾರ ಕನ್ನಂಭೀರ ಪವನ್ ಪೂವಯ್ಯ ಎಂಬುವವರ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುವ ಸಂದರ್ಭ 14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಕಂಡಿದ್ದಾರೆ. ಭಯಭೀತರಾದ ಕಾರ್ಮಿಕರು ಕೂಡಲೇ ತೋಟದ ಮಾಲೀಕರ ಗಮನಕ್ಕೆ ತಂದಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಮೂರ್ನಾಡುವಿನ ಸ್ನೇಕ್ ಪ್ರಜ್ವಲ್ ಕಾಳಿಂಗ ಸರ್ಪವನ್ನು ಹರಸಾಹಸದಿಂದ ರಕ್ಷಿಸಿ ಮಾಕುಟ್ಟ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕರು ಹಾವನ್ನು ಕಂಡರೆ ಯಾರೂ ಕೊಲ್ಲಬೇಡಿ. ನನಗೆ ಮಾಹಿತಿ ನೀಡಿದರೆ ನಾನು ಸ್ಥಳಕ್ಕೆ ಬಂದು ಅದನ್ನು ರಕ್ಷಣೆ ಮಾಡುತ್ತೇನೆ ಎಂದು ಸ್ನೇಕ್ ಪ್ರಜ್ವಲ್ ತಿಳಿಸಿದ್ದಾರೆ. ಸಂಪರ್ಕಿಸಿ -97403 04338