ನಾಪೋಕ್ಲು: ಹಲ್ಲೆ ಪ್ರಕರಣ ಕೊಡವಾಮೆರ ಕೊಂಡಾಟ ಖಂಡನೆ

Feb 27, 2026 - 21:18
 0  1k
ನಾಪೋಕ್ಲು: ಹಲ್ಲೆ ಪ್ರಕರಣ ಕೊಡವಾಮೆರ ಕೊಂಡಾಟ ಖಂಡನೆ

ನಾಪೋಕ್ಲು; ಪಟ್ಟಣದಲ್ಲಿ ನಡೆದಿರುವ ಹಲ್ಲೆ ಪ್ರಕರಣವು ಸಮ ಸಂಸ್ಕೃತಿ ಮತ್ತು ಸಹಭಾಳ್ವೆಯ ಪ್ರಕರಣವಾಗಿದ್ದು, ಕೋಮು ದ್ವೇಷ ಮತ್ತು ಸಹಬಾಳ್ವೆಯನ್ನು ಹದಗೆಡಿಸುವ ದುರುದ್ದೇಶದಿಂದ ನಡೆಸಿರುವ ಈ ಹಲ್ಲೆಯನ್ನು ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.

ಕೋಮು ಸಾಮರಸ್ಯದ ತಾಣವಾಗಿರುವ ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ಅದರಲ್ಲೂ ನಾಪೋಕ್ಲು ಭಾಗದಲ್ಲಿ ಅಧಿಕವಾಗಿದ್ದು, ಇಂತಹ ಕೃತ್ಯಗಳನ್ನ ಈಗಲೇ ಹತ್ತಿಕ್ಕಿದಿದ್ದರೆ ಭವಿಷ್ಯದಲ್ಲಿ ಅಪಾಯ ಅಧಿಕವಿದ್ದು, ಇಲಾಖೆ ಅತ್ಯಂತ ಕಠಿಣ ಕ್ರಮ ಕೈಗೊಂಡು ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸಂಘಟನೆ ಆಗ್ರಹಿಸುತ್ತದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 2
Angry Angry 3
Sad Sad 2
Wow Wow 0