ನಾಪೋಕ್ಲು; ಶ್ರೀ ಚೆವೂಟು ಶಾಸ್ತಾವು ಈಶ್ವರ ದೇವರ ವಾರ್ಷಿಕೋತ್ಸವ ಉತ್ಸವದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

Feb 20, 2026 - 17:21
 0  248
ನಾಪೋಕ್ಲು; ಶ್ರೀ ಚೆವೂಟು ಶಾಸ್ತಾವು ಈಶ್ವರ ದೇವರ ವಾರ್ಷಿಕೋತ್ಸವ ಉತ್ಸವದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ನಾಪೋಕ್ಲು: ಗ್ರಾಮದ ಶ್ರೀ ಚೆವೂಟು ಶಾಸ್ತಾವು ಈಶ್ವರ ದೇವರ ವಾರ್ಷಿಕ ಹಬ್ಬದ ಉತ್ಸವದಲ್ಲಿ ಭಾಗವಹಿಸಲು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಆಗಮಿಸಿದರು.

 ಸಾಂಪ್ರದಾಯಿಕವಾಗಿ ನಡೆದ ಮಹಾ ಪೂಜೆಯ ಬಳಿಕ ಶಾಸಕರು ಪ್ರಸಾದ ಸ್ವೀಕರಿಸಿದರು. ಬಳಿಕ ಚೆವೂಟು ಬಾಳಿಯಾಡ ಐನ್ ಮನೆಯ ಪಟ್ಟಿಲ್ ಮುಡಿ ತೆರೆ ಉತ್ಸವದಲ್ಲಿ ಭಾಗವಹಿಸಿದರು. ದೇವರ ಕಾರ್ಯಕ್ರಮದ ಬಳಿಕ, ಬಾಳಿಯಾಡ ಕುಟುಂಬದ ಹಿರಿಯರು ತಮ್ಮ ಕುಟುಂಬದ ಪರವಾಗಿ ಮಾನ್ಯ ಶಾಸಕರನ್ನು ಸನ್ಮಾನಿಸಿ, ಶಾಸಕರು ನೀಡುತ್ತಿರುವ ಅನುದಾನಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಧನ್ಯವಾದಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ವಲಯ ಅಧ್ಯಕ್ಷರಾದ ಕುಶಾಲಪ್ಪ, ಪಂಚಾಯಿತಿ ಸದಸ್ಯರಾದ ಅರುಣ್ ಬೇಬ, ಶಾಬಾ ತಿಮ್ಮಯ್ಯ, ಬಾಳಿಯಾಡ ಕರುಣ್ ಕಾಳಪ್ಪ, ಬಿ.ಕೆ ಸುಬ್ರಮಣಿ, ಹರೀಶ್, ದಿವ್ಯ, ಪ್ರತೀಶ್, ಅಪ್ಪ ಸ್ವಾಮಿ, ಪೂಣಚ್ಚ, ಕಡಿಯತ್ ಊರಿನವರು, ಅಧ್ಯಕ್ಷರಾದ ನಟೋಳಂಡ ಚರ್ಮಣ್ಣ, ದೇವತಕ್ಕ, ಬಸಪ್ಪ, ತೊರೇರ ಮುದ್ದಾಯ್ಯ, ದೀಪು, ಸರ್ವ ಸದಸ್ಯರುಗಳು ಹಾಗೂ ಪ್ತಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0