ನಾಪೋಕ್ಲು; ಹಳೇತಾಲೂಕು -ಕೊಳಕೇರಿ ಮುಖ್ಯರಸ್ತೆಯ ನೂರಂಬಡದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

ನಾಪೋಕ್ಲು; ಹಳೇತಾಲೂಕು -ಕೊಳಕೇರಿ ಮುಖ್ಯರಸ್ತೆಯ ನೂರಂಬಡದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ತಾಲೂಕು ಕೊಳಕೇರಿ ಮುಖ್ಯರಸ್ತೆಯ ನೂರಂಬಡ ಎಂಬಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಾಪೋಕ್ಲು ಪಂಚಾಯತ್ ವತಿಯಿಂದ ನೂತನ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಲೋಕಾರ್ಪಣೆಗೊಳಿಸಲಾಯಿತು.

 ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್ ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಬಸ್ಸು ತಂಗುದಾಣವನ್ನು ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಗೊಳಿಸಿದರು.

 ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಪಂಚಾಯಿತಿಯ 15ನೇ ಹಣಕಾಸು ಯೋಜನೆಅಡಿಯಲ್ಲಿ ಬಿಡುಗಡೆಯಾದ ಅನುದಾನದಿಂದ ನೂತನ ಬಸ್ಸು ತಂಗುದಾಣವನ್ನು ನಿರ್ಮಿಸಲಾಗಿದ್ದು ಸಾರ್ವಜನಿಕರು ಶುಚಿತ್ವವನ್ನು ಕಾಪಾಡಿಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಪಂಚಾಯಿತಿ ಪ್ರತಿನಿಧಿಗಳು ತಿಳಿಸಿದರು.

 ಸ್ಥಳೀಯ ನಿವಾಸಿ ಹಾಗೂ ನಾಪೋಕ್ಲು ಸಹಕಾರ ಸಂಘದ ನಿರ್ದೇಶಕರಾದ ಎಚ್. ಎ. ಬೊಳ್ಳು ಅವರು ಮಾತನಾಡಿ ಇಲ್ಲಿ ಬಸ್ಸು ತಂಗುದಾಣವನ್ನು ನಿರ್ಮಾಣ ಮಾಡಬೇಕೆಂದು ಇಲ್ಲಿನ ನಿವಾಸಿಗಳ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹಾಲಿಸದಸ್ಯೆ ಕುಲ್ಲೇಟಿರ ಹೇಮಾವತಿ, ಪಂಚಾಯತ್ ಸದಸ್ಯರಾದ ಮಹಮ್ಮದ್ ಕುರೇಶಿ, ಕಾಳೆಯಂಡ ಸಾಬ ತಿಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬ, ಟಿ.ಎ.ಮಹಮ್ಮದ್, ಲಲಿತಾ, ಕಾಂಗ್ರೆಸ್ ನ ಪ್ರಮುಖ ಹಾಗೂ ಗುತ್ತಿಗೆದಾರ ಚುಕ್ಕಂಡ ಉಂಬಾಯಿ, ಸ್ಥಳೀಯರಾದ ಉಮಾಲಕ್ಷ್ಮಿ, ಅಪ್ಪಾಜಿ ಚಂಗಪ್ಪ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಮತ್ತಿತರರು ಹಾಜರಿದ್ದರು.