ನಾಪೋಕ್ಲು ಶಾದಿ ಮಹಲ್ ವಿಚಾರ; ಮುಂದಿನ ತನಿಖೆ ಹಾಗೂ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಜಿಲ್ಲಾಧಿಕಾರಿ ಆದೇಶ
admincoorgdaily

ಮಡಿಕೇರಿ; ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ರವರ ಸೂಚನೆ ಮೇರೆಗೆ, ನಾಪೋಕ್ಲು ಶಾದಿ ಮಹಲ್ ವಿಚಾರವಾಗಿ, ಮುಂದಿನ ತನಿಖೆ ಹಾಗೂ ಆದೇಶದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಜಿಲ್ಲಾಧಿಕಾರಿ ಸೋಮಶೇಖರ್ ಆದೇಶ ನೀಡಿದ್ದಾರೆ.
ಸರ್ವೇ ನಡೆಸಲು ಅಧಿಕಾರಿ ಗಳ ತಂಡ ರಚನೆ: ನಾಪೋಕ್ಲು ಹೋಬಳಿ ಬೇತು ಗ್ರಾಮದ ಸರ್ವೆ ನಂ. 18/3ರ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಮಡಿಕೇರಿ ತಾಲೂಕು ನಾಪೋಕ್ಲು ಹೋಬಳಿಯ ಬೇತು ಗ್ರಾಮದ ಸರ್ವೆ ನಂ. 18/3ರ ಜಾಗದ ಜಂಟಿ ತಪಾಸಣೆ ಮತ್ತು ಸರ್ವೆ ನಡೆಸಿ ನಿಯಮಾನುಸಾರ ಸೂಕ್ರ ಕ್ರಮ ಕೈಗೊಂಡು ವರದಿ ಸಲ್ಲಿಸಲು ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ಅಧಿಕಾರಿಗಳ ತಂಡದ ವರದಿ ಬರುವವರೆಗೂ ಹಾಗೂ ಮುಂದಿನ ನಿರ್ದೇಶನದವರೆಗೆ ಸದರಿ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಕ್ತ ಕ್ರಮ ವಹಿಸುವಂತೆ ಉಪವಿಭಾಗಾಧಿಕಾರಿ ಹಾಗೂ ಮಡಿಕೇರಿ ತಾಲೂಕು ತಹಶೀಲ್ದಾರ್ ರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.