ನಾಪೋಕ್ಲು :ವಿಶೇಷ ಚೇತನ ಮಕ್ಕಳೊಂದಿಗೆ ವೀರೇಂದ್ರ ಹೆಗಡೆ ಅವರ ಹುಟ್ಟುಹಬ್ಬ ಆಚರಣೆ

Nov 27, 2025 - 14:30
 0  242
ನಾಪೋಕ್ಲು :ವಿಶೇಷ ಚೇತನ  ಮಕ್ಕಳೊಂದಿಗೆ ವೀರೇಂದ್ರ ಹೆಗಡೆ ಅವರ ಹುಟ್ಟುಹಬ್ಬ ಆಚರಣೆ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲುವಿನ ನವ ಜೀವನ ಸಮಿತಿ ವತಿಯಿಂದ ವಿಶೇಷ ಚೇತನ ಮಕ್ಕಳೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ನಾಪೋಕ್ಲುವಿನ ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ ನಲ್ಲಿರುವ ವಿಶೇಷ ಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ವೀರೇಂದ್ರ ಹೆಗಡೆಯವರ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ನವ ಜೀವನ ಸಮಿತಿಯ ಸದಸ್ಯರಾದ ಬಾಲ ಸುಬ್ರಮಣಿ ಹಾಗೂ ಪತ್ನಿ ಮಂಜುಳಾ ಅವರು ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಿದರು.

ಇದೇ ಸಂದರ್ಭ ಸಂಸ್ಥೆಯ ವಿಶೇಷ ಚೇತನ ಮಕ್ಕಳು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭ ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಬಾಳೆಯಡ ದಿವ್ಯ ಮಂದಪ್ಪ, ಸಂಸ್ಥೆಯ ಶಿಕ್ಷಕಿಯರಾದ ಅಸ್ಮಾ, ಚಂದ್ರಕಲಾ, ನವ ಜೀವನ ಸಮಿತಿಯ ಪೋಷಕರಾದ ಉಮಾಲಕ್ಷ್ಮಿ ,ಶೌರ್ಯ ತಂಡದ ಸದಸ್ಯರು, ಆಶಾಕಾರ್ಯಕರ್ತೆಯರು ಹಾಗೂ ವಿಶೇಷ ಚೇತನ ಮಕ್ಕಳು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0