ಪ್ರಕೃತಿ ವಿಕೋಪ ನಿರ್ವಹಣೆ:ಕೊಡಗು ಮೇಲುಸ್ತುವಾರಿಯಾಗಿ ಸಚಿವ ಯು.ಟಿ ಖಾದರ್ ನೇಮಕ

Jun 25, 2026 - 12:52
Jun 25, 2026 - 13:01
 0  291
ಪ್ರಕೃತಿ ವಿಕೋಪ ನಿರ್ವಹಣೆ:ಕೊಡಗು ಮೇಲುಸ್ತುವಾರಿಯಾಗಿ ಸಚಿವ  ಯು.ಟಿ ಖಾದರ್ ನೇಮಕ

ಬೆಂಗಳೂರು, ಜೂ. 26: ಮುಂಗಾರು ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿಗಾಗಿ ರಾಜ್ಯ ಸರ್ಕಾರ ಉಪ ಮುಖ್ಯಮಂತ್ರಿ ಹಾಗೂ ಸಚಿವರನ್ನು ಜಿಲ್ಲೆಗಳಿಗೆ ನೇಮಿಸಿ ಆದೇಶ ಹೊರಡಿಸಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರಲಿದೆ. ಕೊಡಗು ಜಿಲ್ಲೆಯ ಮೇಲುಸ್ತುವಾರಿ ಹೊಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ವಹಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ ಜಿಲ್ಲೆಗಳ ಜವಬ್ದಾರಿ ಕೂಡ ಯು.ಟಿ ಖಾದರ್ ಅವರಿಗೆ ನೀಡಲಾಗಿದೆ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0