ಅಂಬಟ್ಟಿಯಲ್ಲಿ ನೂತನ ಗಣೇಶೋತ್ಸವ ಸಮಿತಿ ಅಸ್ತಿತ್ವಕ್ಕೆ:ಅಧ್ಯಕ್ಷರಾಗಿ ಎನ್. ಸಿ. ವಿಜಯ ಕುಮಾರ್ ಆಯ್ಕೆ
ವಿರಾಜಪೇಟೆ: ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಅಂಬಟ್ಟಿ ಗ್ರಾಮದಲ್ಲಿ ಶ್ರೀ ವಿಜಯ ವಿಘ್ನೇಶ್ವರ ಸೇವಾ ಸಮಿತಿ ನೂತನವಾಗಿ ರಚನೆಯಾಗಿದ್ದು, ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎನ್. ಸಿ. ವಿಜಯ ಕುಮಾರ್, ಉಪಾಧ್ಯಕ್ಷರಾಗಿ ವಿಶ್ವನಾಥ್, ಕಾರ್ಯದರ್ಶಿಯಾಗಿ ಪ್ರಮೋದ್ ಇಂಜಿನಿಯರ್, ಸಹ ಕಾರ್ಯದರ್ಶಿಯಾಗಿ ಹೇಮಾ ಟೀಚರ್, ಕೋಶಾಧಿಕಾರಿಗಳಾಗಿ ಚೇಂದಂಡ ಗಣೇಶ್, ನಿರ್ದೇಶಕ ರಾಗಿ ಜೀವನ್ ನಾಣಯ್ಯ, ರಾಧಕೃಷ್ಣ, ಮಂಜುನಾಥ್, ಸುರೇಶ್, ವಿಜಯ,ಮನು ಮಂದಣ್ಣ, ಚೇಂದಂಡ ಸುರೇಶ್, ಮತ್ತು ಸೋಮಯ್ಯ ಅವರು ಆಯ್ಕೆಯಾಗಿದ್ದಾರೆ. ಪ್ರಥಮ ವರ್ಷದ ಉತ್ಸವದ ಅಂಗವಾಗಿ ತಾ. 27 ರಂದು ಉತ್ಸವ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೂರು ದಿನಗಳು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು,ಬಳಿಕ ತಾ. 29 ರಂದು ಉತ್ಸವ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ನೂತನ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ: ಕಿಶೋರ್ ಕುಮಾರ್ ಶೆಟ್ಟಿ