Kodagu

ಮತಾಂತರ ವಿರೋಧಿ ಜನಾಂದೋಲನಕ್ಕೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನೈತಿಕ ಬೆಂಬಲ

admincoorgdaily

ಮತಾಂತರ ವಿರೋಧಿ ಜನಾಂದೋಲನಕ್ಕೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನೈತಿಕ ಬೆಂಬಲ

ಮಡಿಕೇರಿ: ಮತಾಂತರ ವಿರೋಧಿ ಜನಾಂದೋಲನಕ್ಕೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್(ಎನ್‌ಟಿಸಿ) ನೈತಿಕ ಬೆಂಬಲ ಸೂಚಿಸಲಿದೆ ಎಂದು ಎನ್‌ಟಿಸಿಯ ಉದ್ಯಮಿ ಅಂಚೆಮನೆ ಮುರಳಿ ತಿಳಿಸಿದರು.

ಎನ್‌ಟಿಸಿಯಲ್ಲಿ ೧೦೦ಕ್ಕೂ ಹೆಚ್ಚು ಹಿಂದೂಗಳು ಸೇರಿದಂತೆ ೩೦೦ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ೨೦-೨೫ ಮಳಿಗೆಗಳು ಹಿಂದುಗಳದ್ದಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಗ್ಗಟ್ಟಿನಿಂದ ಇದ್ದಾರೆ ಎಂದು ತಿಳಿಸಿದ ಅವರು, ಬಲವಂತದ ಮತಾಂತರವನ್ನು ವಿರೋಧಿಸುವುದಾಗಿ ಹೇಳಿದರು.

ಮತಾಂತರ ಪ್ರಕರಣ ಹಿನ್ನೆಲೆ ಇಡೀ ಎನ್‌ಟಿಸಿ ಹೆಸರು ತರಲಾಗುತ್ತಿದೆ. ಪರಿಣಾಮ ಇಡೀ ಎನ್‌ಟಿಸಿಯಲ್ಲಿ ಮತಾಂತರ ನಡೆಯುತ್ತಿದೆ ಎಂದು ಬಿಂಭಿಸಲಾಗುತ್ತಿದೆ. ಇದು ಸರಿಯಲ್ಲ. ಆದ್ದರಿಂದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎನ್‌ಟಿಸಿಯ ಉದ್ಯಮಿಗಳಾದ ಲೋಕೇಶ್, ಗಜರಾಂ ಚೌದರಿ, ಸದಾಶಿವ, ಬಿನೇಶ್ ಇದ್ದರು.