ಅಧಿಕಾರಿ ಅಮ್ಮಂಡ ಜಿ. ಕಾರ್ಯಪ್ಪ ಅವರಿಗೆ ಡಿಜಿ-ಐಜಿಪಿ ಪ್ರಶಂಸನಾ ಪದಕ
ಮಡಿಕೇರಿ, ಜೂ. 26:ಕರ್ನಾಟಕ ರಾಜ್ಯದಲ್ಲಿ 2020ರಿಂದ 2025ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ನೀಡಲಾಗುವ ಪ್ರತಿಷ್ಠಿತ 'ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ' -DG & IGP Commendation Disc- ಕ್ಕೆ ಕೊಡಗಿನ ಅಮ್ಮಂಡ ಜಿ. ಕಾರ್ಯಪ್ಪ ಅವರು ಆಯ್ಕೆಯಾಗಿದ್ದಾರೆ. ಮೂಲತಃ ಕಡಂಗ-ಮೂರೂರು ಗ್ರಾಮದವರಾಗಿದ್ದಾರೆ.

