ಲೀಟರ್ ಹಾಲು ಆರ್ಡರ್ ಮಾಡಿ ಎಷ್ಟು ಲಕ್ಷ ರೂ ಕಳೆದುಕೊಂಡರು ಗೊತ್ತೇ!

ಲೀಟರ್ ಹಾಲು ಆರ್ಡರ್ ಮಾಡಿ ಎಷ್ಟು ಲಕ್ಷ ರೂ  ಕಳೆದುಕೊಂಡರು ಗೊತ್ತೇ!

ಮುಂಬಯಿ: ಆನ್‌ಲೈನ್‌ನಲ್ಲಿ ಒಂದು ಲೀಟ‌ರ್ ಹಾಲು ಆರ್ಡರ್ ಮಾಡಲು ಹೋದ ಮುಂಬಯಿ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 18.5 ಲಕ್ಷರೂ. ಮುಂಬಯಿಯ ವಡಾಲಾ ನಿವಾಸಿ ಆನ್‌ಲೈನ್ ಮೂಲಕ ಹಾಲಿಗೆ ಆರ್ಡರ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಕೇವಲ ಎರಡು ದಿನಗಳಲ್ಲಿ ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚಲಾಗಿದೆ.

ಕೆಲ ದಿನಗಳ ಹಿಂದೆ ಹಾಲು ಕಂಪನಿಯ ಮಾರಾಟ ಅಧಿಕಾರಿ ದೀಪಕ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನಿಂದ ಕರೆ ಬಂದಿದೆ. ಆತ ಹಾಲನ್ನು ಆರ್ಡರ್ ಮಾಡಲು ವಿವರ ನೀಡುವಂತೆ ಲಿಂಕ್ ಕಳುಹಿಸಿದ್ದಾನೆ. ಕರೆಯನ್ನು ಕಡಿತಗೊಳಿಸದೆ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಮತ್ತು ಮುಂದಿನ ಸೂಚನೆಗಳನ್ನು ಅನುಸರಿಸಲು ಮಹಿಳೆಗೆ ಸೂಚಿಸಿದ್ದಾನೆ. ಗಂಟೆಗೂ ಹೆಚ್ಚು ಕಾಲ ಇದ್ದು ನಂತರ ಬೇಸರದಿಂದ ಆಕೆ ಕರೆಯನ್ನು ಕಟ್ ಮಾಡಿದ್ದಾರೆ. ಕೆಲ ದಿನಗಳ ನಂತರ ಬ್ಯಾಂಕ್‌ಗೆ ಭೇಟಿ ನೀಡಿದಾಗ ತಮ್ಮ ಖಾತೆಯಿಂದ 1.7 ಲಕ್ಷ ರೂ.ಗಳನ್ನು ವಂಚಿಸಲಾಗಿದೆ ಎಂಬುದು ಗೊತ್ತಾಗಿದೆ. ಆದರೆ ಆಕೆಯ ಉಳಿದ ಇತರ ಎರಡು ಬ್ಯಾಂಕ್ ಖಾತೆಗಳಿಂದಲೂ ಹಣ ಖಾಲಿ ಮಾಡಿದ್ದಾರೆ. ಪೊಲೀಸರ ಪ್ರಕಾರ, ಎಲ್ಲ ಮೂರು ಬ್ಯಾಂಕ್ ಖಾತೆಗಳಿಂದ ದೂರುದಾರರು ಒಟ್ಟು 18.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.