ಪಟ್ಟೇದಾರ ಸಮಸ್ಯೆ:ಕರ್ನಾಟಕ ವಿಧಾನಸಭಾ ಪರಿಶೀಲನಾ ಸಮಿತಿಯ 2ನೇ ಮಹತ್ವದ ಸಭೆಯಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ
ಬೆಂಗಳೂರು:ಕೊಡಗು ಜಿಲ್ಲೆಯ ನಾಗರೀಕರನ್ನು ದಶಕಗಳಿಂದ ಪರಿಹಾರ ಕಾಣದೆ ಕಾಡುತ್ತಿರುವ ಪಟ್ಟೇದಾರ ಸಮಸ್ಯೆಯ ಕುರಿತು, ಕಳೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಕೋರಿಕೆ ಮೇರೆಗೆ ರಚಿತವಾದ, ಕರ್ನಾಟಕ ವಿಧಾನಸಭೆ ಪರಿಶೀಲನ ಸಮಿತಿಯ 2ನೇ ಮಹತ್ವದ ಸಭೆ ಇಂದು ವಿಧಾನಸೌಧದಲ್ಲಿ ನಡೆಯಿತು.
ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಹಲವು ಮಹತ್ವದ ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳಲಾಯಿತು.