ಪೆರಾಜೆ:ನೂತನ ಆಟೋರಿಕ್ಷಾ ನಿಲ್ದಾಣ ಲೋಕಾರ್ಪಣೆ

ಪೆರಾಜೆ:ನೂತನ ಆಟೋರಿಕ್ಷಾ ನಿಲ್ದಾಣ ಲೋಕಾರ್ಪಣೆ

ಪೆರಾಜೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ, ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ನ, ಪೆರಾಜೆ ಗ್ರಾಮದಲ್ಲಿ, ನೂತನವಾಗಿ ನಿರ್ಮಾಣಗೊಂಡ ಆಟೋರಿಕ್ಷಾ ತಂಗುದಾಣವನ್ನು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಲೋಕಾರ್ಪಣೆ ಮಾಡಿದರು.

ಈ ಭಾಗದಲ್ಲಿ ಆಟೋರಿಕ್ಷಾ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಸುಸಜ್ಜಿತ ಆಟೋ ತಂಗುದಾಣದ ಅಗತ್ಯತೆಯನ್ನು ಮನಗಂಡಿದ್ದ ಶಾಸಕರು ಈ ಹಿಂದೆ ಇದಕ್ಕಾಗಿ ಅನುದಾನ ಒದಗಿಸಿದ್ದರು. ಇಂದು ಇದರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸ್ಥಳೀಯರು ಹಾಗೂ ಆಟೋ ಚಾಲಕರು  ಶಾಸಕರಿಗೆ ಧನ್ಯವಾದಗಳನ್ನ ಅರ್ಪಿಸಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಅಧ್ಯಕ್ಷರಾದ ಜಯರಾಮ್ ಪೆರುಮುಂಡ, ಪಕ್ಷದ ಪ್ರಮುಖರಾದ ಕೊಲ್ಯದ ಗಿರಿಶ್, ರಮನಾಥ್ ಬೇಕಲ್, ನೆರವಂಡ ಉಮೇಶ್, ಸುರೇಶ್ ಪೆರುಮುಂಡ, ಟಿ.ಎಂ ಶಹೀದ್, ಸೂರಜ್ ಹೊಸೂರು,ಚುನಾಯಿತ ಜನಪ್ರತಿನಿಧಿಗಳು, ಸರಕಾರಿ ನಾಮನಿರ್ದೇಶಿತ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಡಿಸಿಸಿ ಪದಾಧಿಕಾರಿಗಳು, ವಲಯದ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.