ಮಾಜಿ ಸೈನಿಕರ ಕಟ್ಟಡ ನಿರ್ಮಾಣಕ್ಕೆ ಶಾಸಕ ಪೊನ್ನಣ್ಣರವರಿಂದ ವೈಯಕ್ತಿಕ ಧನ ಸಹಾಯ

Dec 24, 2025 - 15:41
 0  701
ಮಾಜಿ ಸೈನಿಕರ ಕಟ್ಟಡ ನಿರ್ಮಾಣಕ್ಕೆ ಶಾಸಕ ಪೊನ್ನಣ್ಣರವರಿಂದ ವೈಯಕ್ತಿಕ ಧನ ಸಹಾಯ

ವಿರಾಜಪೇಟೆ: ಮಾಜಿ ಸೈನಿಕರ ಸಂಘದ ಮೂರನೇ ಮಹಡಿಯ ಕಟ್ಟಡ ನಿರ್ಮಾಣಕ್ಕೆ, ಸರ್ಕಾರದ ವತಿಯಿಂದ ಹಣಕಾಸು ನೆರವು ಕೇಳಿದ್ದು, ಸರ್ಕಾರದ ವತಿಯಿಂದ ಹಣ ಬರುವುದು ಸ್ವಲ್ಪ ವಿಳಂಬ ಆಗಬಹುದು ಎಂಬ ಕಾರಣದಿಂದಾಗಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು, ವೈಯಕ್ತಿಕವಾಗಿ ₹1 ಲಕ್ಷ ಹಣವನ್ನು ಈ ಕಾಮಗಾರಿ ಮುಂದುವರೆಯಲು ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ, ಇಂದು ಮಾಜಿ ಸೈನಿಕ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರು, ಶಾಸಕರ ಗೃಹ ಕಛೇರಿಯಲ್ಲಿ ಮಾನ್ಯ ಶಾಸಕರಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ಪಟ್ಟಡ ರಂಜಿ ಪೂಣಚ್ಚ, ಜೋಕಿಮ್, ಬಟ್ಟಕಳ್ಳಂಡ ರಾಜ, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್ ಚಂಗಪ್ಪ, ಮಂಜುನಾಥ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮಹೇಶ್ ನಾಚಯ್ಯ, ಮಾಜಿ ಸೈನಿಕರಾದ ಚಪ್ಪಂಡ ಹರೀಶ್, ಪುಗ್ಗೆರ ನಂದ, ತೋರೆರ ಪೂವಯ್ಯ, ಬಾಳೆಕುಟ್ಟಿರ ದಿನಿ, ಎಚ್.ಕೆ ಅಪ್ಪಯ್ಯ, ಸಲಾಂ ಕಡಂಗ, ಸುಬ್ಬಯ್ಯ, ರತ್ನ ಸೇರಿದಂತೆ ಅನೇಕ ಮಾಜಿ ಸೈನಿಕರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0