ಮಕ್ಕಳ ಸಾಹಿತ್ಯ ಪರಿಷತ್ ಆಯೋಜಿತ ಕವನ ವಾಚನ ಸ್ಪರ್ಧೆ : ಸ್ಪಂದನ ಕಾವೇರಮ್ಮ ಪ್ರಥಮ, ಆತ್ಮೀಯ ದೀಪ್ ದ್ವಿತೀಯ

Jun 17, 2026 - 13:16
 0  257
ಮಕ್ಕಳ ಸಾಹಿತ್ಯ ಪರಿಷತ್ ಆಯೋಜಿತ ಕವನ ವಾಚನ ಸ್ಪರ್ಧೆ : ಸ್ಪಂದನ ಕಾವೇರಮ್ಮ ಪ್ರಥಮ, ಆತ್ಮೀಯ ದೀಪ್ ದ್ವಿತೀಯ

ಪೊನ್ನಂಪೇಟೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕ, ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ ನಡೆದ ತಾಲೂಕು ಮಟ್ಟದ ಕವನ ವಾಚನ ಸ್ಪರ್ಧೆಯಲ್ಲಿ, ಟಿ ಶೆಟ್ಟಿಗೇರಿ ರೂಟ್ಸ್ ಶಾಲೆಯ ಒಂಭತ್ತನೆಯ ತರಗತಿ ವಿದ್ಯಾರ್ಥಿನಿ ಅಣ್ಣೀರ ಸ್ಪಂದನ ಕಾವೇರಮ್ಮ ಪ್ರಥಮ, ಗೋಣಿಕೊಪ್ಪ ಲಯನ್ಸ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಆತ್ಮೀಯ ದೀಪ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅಂತರ್ಜಾಲದ ಮೂಲಕ ನಡೆದ ಕವನ ವಾಚನ ಸ್ಪರ್ಧೆಯಲ್ಲಿ ತಾಲೂಕಿನ ಹಲವು ವಿದ್ಯಾರ್ಥಿಗಳು ಭಾಗವಹಿಸಿ, ಸ್ವರಚಿತ ಹಾಗೂ ಇತರ ಕವಿಗಳ ಸಾಹಿತ್ಯವನ್ನು ವಾಚಿಸಿದರು. ಸ್ಪರ್ಧೆಯು ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಮಾರ್ಗದರ್ಶನದಲ್ಲಿ, ಪ್ರಧಾನ ಕಾರ್ಯದರ್ಶಿ ಕರಿನೆರವಂಡ ಡ್ಯಾನಿಕುಶಾಲಪ್ಪ ಅವರ ಸಹಕಾರದೊಂದಿಗೆ, ಪೊನ್ನಂಪೇಟೆ ತಾಲೂಕು ಘಟಕದ ಸಹಬಾಗಿತ್ವದಲ್ಲಿ ಯಶಸ್ವಿಯಾಗಿ ನಡೆದಿದ್ದು, ಸ್ಪರ್ಧೆಯ ತೀರ್ಪುಗಾರರಾಗಿ ನಂಬಿಯಪಂಡ ರಂಜು ನಾಣಯ್ಯ ಕಾರ್ಯನಿರ್ವಹಿಸಿದರು.

 ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಸಂಶನಾ ಪತ್ರಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಪೊನ್ನಂಪೇಟೆ ತಾಲೂಕು ಅಧ್ಯಕ್ಷೆ ಚೇಂದೀರ ರಮ್ಯಾ ಜಗನ್ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0