ಪೊನ್ನಂಪೇಟೆ: ನಾಗರಿಕ ವೇದಿಕೆ ವತಿಯಿಂದ ಶಾಸಕ ಎಎಸ್ ಪೊನ್ನಣ್ಣ ಮತ್ತು ರಾಜ್ಯ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರಿಗೆ ಸನ್ಮಾನ
ಪೊನ್ನಂಪೇಟೆ:ನಾಗರಿಕ ವೇದಿಕೆ ಪೊನ್ನಂಪೇಟೆ, ಇವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾನ್ಯ ಶಾಸಕರು, ನಾಗರಿಕ ವೇದಿಕೆಯವರು ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನರ ನಾಡಿಮಿಡಿತವನ್ನು ಅರಿತವರಾಗಿದ್ದಾರೆ. ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಗರಿಕ ವೇದಿಕೆ ವತಿಯಿಂದ ಆಯೋಜನೆಗೊಳ್ಳುತ್ತಿರುವುದು ಸಂತಸದ ವಿಷಯ. ನಾಗರಿಕ ವೇದಿಕೆಯವರ ಈ ಪ್ರಯತ್ನ ಮುಂದೆಯೂ ಹೀಗೆ ಬೆಳೆದು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿಶಾಸಕರಾದ ಪೊನ್ನಣ್ಣ ರವರನ್ನು ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಅವರೊಂದಿಗೆ ಅವರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ರವರು ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ನೂತನ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಆಗಿರುವ ಅರುಣ್ ಮಾಚಯ್ಯ ರವರಿಗೂ ಸನ್ಮಾನಿಸಲಾಯಿತು ಹಾಗೂ ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಾಗರಿಕ ವೇದಿಕೆ ಅಧ್ಯಕ್ಷರು ವಿಶ್ವನಾಥ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಚೆಪ್ಪುಡೀರ ಪೊನ್ನಪ್ಪ, ಮುಕಳೇರ ಸುರೇಶ್, ಎರ್ಮು ಹಾಜಿ, ಹಿರಿಯರಾದ ಮುಕಳೇರ ಕುಶಾಲಪ್ಪ, ಪೆಮ್ಮಂಡ ಪೊನ್ನಪ್ಪ, ಪ್ರಮುಖರಾದ ಕಾಳಿಮಾಡ ಪ್ರಶಾಂತ್, ಮುಕಟ್ಟೀರ ಸಂದೀಪ್, ಬಾನಂಡ ಪೃಥ್ವಿ, ಹಾಗೂ ಪ್ರಮುಖರು ಕಾಕೇರ ರವಿ, ಗಿರೀಶ್, ದಿಲು, ಅಜ್ಜಿಕುಟ್ಟಿರ ಪೊನ್ನು, ಶಾಜಿ ಅಚ್ಚುತನ್, ಹ್ಯಾರೀಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.