ಪೊನ್ನಂಪೇಟೆ: ಕೂಟಿಯಾಲ ಸೇತುವೆ ವೀಕ್ಷಿಸಿದ ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ: ತಾಲೂಕಿನ ಬಿ ಶೆಟ್ಟಿಗೇರಿಯ ಕೂಟಿಯಾಲ ಸೇತುವೆಯ ವೀಕ್ಷಣೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಕೈಗೊಂಡರು. ಕೂಟಿಯಾಲ ರಸ್ತೆ ಹಾಗೂ ಸೇತುವೆ ವಿಷಯ ಈಗಾಗಲೇ ನ್ಯಾಯಾಲಯದಲ್ಲಿದ್ದು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಸಾರ್ವಜನಿಕರ ಬೇಡಿಕೆಯ ಮೇರೆಗೆ ಶಾಸಕರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದರು.
ಅಲ್ಲಿ ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿದ ಬಳಿಕ ಪರ್ಯಾಯ ಮಾರ್ಗ ಒದಗಿಸುವ ಬಗ್ಗೆ ಸಹ ಚರ್ಚಿಸಲಾಯಿತು. ಎಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿ ಅತಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಗರ್ ಹುಕುಂ ತಾಲೂಕು ಅಧ್ಯಕ್ಷರು ಲಾಲಾ ಅಪ್ಪಣ್ಣ, ಪಂಚಾಯಿತಿ ಅಧ್ಯಕ್ಷರು ಕೊಲ್ಲಿರ ಬೋಪಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಉಮೇಶ್ ಕೇಚಮಯ್ಯ, ರೋಹಿತ್, ಅನು, ಅಯ್ಯಪ್ಪ, ಜಗನ್, ರಾಜ, ಈರಪ್ಪ, ನಂದ, ಅಣ್ಣಳಮಾಡ ಹರೀಶ್, ಕುಪ್ಪಣ್ಣಮಾಡ ಪ್ರೀತಮ್, ಜೀತು, ರಶೀದ್, ಅರಣ್ಯ ಇಲಾಖೆಯ ಅಧಿಕಾರಿಗಳು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.