Kodagu

ಎಮ್ಮೆಮಾಡು ದರ್ಗಾದಲ್ಲಿ ಕಾಸರಗೋಡು ನೆಲ್ಲಿಕುನ್ನ್ ತಂಙಳ್ ಉಪ್ಪಾಪ ಉರೂಸ್ ಪ್ರಚಾರದ ಪೋಸ್ಟರ್ ಬಿಡುಗಡೆ

admincoorgdaily

ಎಮ್ಮೆಮಾಡು ದರ್ಗಾದಲ್ಲಿ ಕಾಸರಗೋಡು ನೆಲ್ಲಿಕುನ್ನ್  ತಂಙಳ್ ಉಪ್ಪಾಪ ಉರೂಸ್ ಪ್ರಚಾರದ ಪೋಸ್ಟರ್ ಬಿಡುಗಡೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಇತಿಹಾಸ ಪ್ರಸಿದ್ಧ ಕಾಸರಗೋಡುವಿನ ನೆಲ್ಲಿಕುನ್ನ್ ಮುಹಿಯುದ್ದೀನ್ ಜುಮಾಮಸೀದಿಯ ಪ್ರಾಂಗಣದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮುಹಮ್ಮದ್ ಹನೀಫ್ ತಂಙಳ್ ಉಪ್ಪಾಪ (ರ.ಅ) ರವರ 2026ರ ಜ. 7ರಿಂದ17ರವರೆಗೆ ನಡೆಯಲಿರುವ ವಾರ್ಷಿಕ ಉರೂಸ್ ಸಮಾರಂಭದ ಪೋಸ್ಟರ್ ಅನ್ನು ಎಮ್ಮೆ ಮಾಡುವಿನಲ್ಲಿ ಬಿಡುಗಡೆ ಗೊಳಿಸಲಾಯಿತು. 

 ಎಮ್ಮೆಮಾಡುವಿನ ಶೂಫೀ ಶಹೀದ್ (ರ.ಅ)ದರ್ಗಾದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಚಂಬರಂಡ ಸಿ.ಎಂ.ಮಾಹಿನ್ ಎಮ್ಮೆಮಾಡು ಮಸೀದಿಯ ಖತೀಬಾರಾದ ರಾಝಿಕ್ ಫೈಝಿ ಅವರು ಉರೂಸ್ ಪೋಸ್ಟರ್ ಅನಾವರಣ ಗೊಳಿಸಿದರು. ಎಮ್ಮೆಮಾಡು ಮಸೀದಿಯ ಮುದರ್ರಿಸ್ ಹಂಝ ಸಖಾಫಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ನೆಲ್ಲಿಕುನ್ನ್ ತಂಙಳ್ ಉಪ್ಪಾಪ ಉರೂಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಉರೂಸ್ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.ಉರೂಸ್ ಸಮಾರಂಭವು 2026 ರ ಜ. 7ರಿಂದ 17ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಕೊಡಗಿನ ವಿವಿಧ ಭಾಗಗಳಿಂದ ಹಲವಾರು ಭಕ್ತಾಧಿಗಳು ಪ್ರತಿ ವರ್ಷ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಇದರ ಅಂಗವಾಗಿ ಕೊಡಗಿನ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಶೂಫೀ ಶಹೀದ್ ಮಹಾನುಭಾವರ ದರ್ಗಾದಲ್ಲಿ ಉರೂಸ್ ದಿನಾಂಕದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ನೆಲ್ಲಿಕುನ್ನ್ ತಂಙಳ್ ಉಪ್ಪಾಪ ಅವರ ಉರೂಸ್ ಸಮಾರಂಭದಲ್ಲಿ ಪಾಲ್ಗೊಂಡು ಮಹಾನುಭಾವರ ಆಶೀರ್ವಾದ ಪಡೆದು ಉರೂಸ್ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಎಮ್ಮೆಮಾಡು ಜಮಾಅತ್ ಕಾರ್ಯದರ್ಶಿ ಸೈಯ್ಯಿದ್ ಝಕರಿಯ ಸಅದಿ ತಂಙಳ್, ಕೋಶಾಧಿಕಾರಿ ಅಬ್ದುಲ್ ಮಜೀದ್,ಮಾಜಿ ಕಾರ್ಯದರ್ಶಿ ಸಿ. ಎಂ. ಹಾರಿಸ್,ಗ್ರಾಮ ಪಂಚಾಯಿತಿ ಸದಸ್ಯರಾದ ಚಕ್ಕೇರ ಇಸ್ಮಾಯಿಲ್,ಯುಸುಫ್ ಟಿ.ಕೆ, ಗಫೂರ್ ಪಡಿಯಾಣಿ,

ಪಡಿಯಾಣಿ ಜಮಾಅತ್ ಪದಾಧಿಕಾರಿಗಳಾದ ಮೊಯ್ದು,ಮಾಹಿನ್, ಅಬ್ದುಲ್ ಖಾದರ್ ಮುಸ್ಲಿಯಾರ್, ಮುಹಮ್ಮದ್ ಇರ್ಫಾನ್ ಮಡಿಕೇರಿ,ಜಮಾಲ್ ಪಡನ್ನಾ,ಎಂ.ಡಿ ಸುಲೈಮಾನ್, ಮಜೀದ್ ಕಡಬ, ನಾಸರ್,ಉವೈಸ್, ಮುಹಮ್ಮದ್, ನೆಲ್ಲಿಕುನ್ನ್ ಉರೂಸ್ ಸಮಿತಿ ಪದಾಧಿಕಾರಿಗಳಾದ ರಾಶಿದ್, ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.