ಮಾಲ್ದಾರೆ ಗ್ರಾ.ಪಂ ಎದುರು ನಿವೇಶನಕ್ಕೆ ಒತ್ತಾಯಿಸಿ ಪ್ರತಿಭಟನೆ

Apr 17, 2026 - 11:39
Apr 17, 2026 - 12:13
 0  520
ಮಾಲ್ದಾರೆ ಗ್ರಾ.ಪಂ ಎದುರು ನಿವೇಶನಕ್ಕೆ ಒತ್ತಾಯಿಸಿ  ಪ್ರತಿಭಟನೆ

ಸಿದ್ದಾಪುರ:- ನಿವೇಶನ ರಹಿತರಿಗೆ ಸೂರು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಮಾಲ್ದಾರೆ ಗ್ರಾಮ ಪಂಚಾಯತ್ ಕಛೇರಿಯ ಮುಂಭಾಗದಲ್ಲಿ ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯುನಿಯನ್(ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ಘಾಟಿಸಿ, ಮಾತನಾಡಿದ ಕೊಡಗು ಜಿಲ್ಲಾ ಜಂಡ್ರಲ್ ವರ್ಕರ್ಸ್ ಯುನಿಯನ್(ಸಿಐಟಿಯು)ನ ಜಿಲ್ಲಾ ಕಾರ್ಯದರ್ಶಿ ಮಹೇದೇವ್,ತಲೆ ತಲೆಮಾರುಗಳಿಂದ ತೋಟದ ಲೖನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸಿಸುವ ಬಡಕೂಲಿ ಕಾರ್ಮಿಕರಿಗೆ ಸ್ವಂತ ಸೂರು ಕಲ್ಪಸಿಕೊಡುವಲ್ಲಿ ಸರಕಾರ ವಿಫಲವಾಗಿದೆ. ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು ಸರಕಾರ ಬಡವರನ್ನು ಕಡೆಗಣಿಸುತ್ತಲೆ  ಬರುತ್ತಿದ್ದಾರೆ.

 ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಹೋರಾಟವಾಗಿದ್ದು ಅಮ್ಮತ್ತಿ ಹೋಬಳಿಯ ಮಾಲ್ದಾರೆ ಹಾಗೂ ಸಿದ್ದಾಪುರ ಭಾಗದ ಪೈಸಾರಿ ಜಾಗದ ದಾಖಲೆಯೊಂದಿಗೆ ಇಂದು ಮನವಿ ಸಲ್ಲಿಸುತ್ತಿದ್ದೇವೆ. ಮುಂದಿನ 15ದಿನಗಳಲ್ಲಿ ಸರ್ವೇ ಕಾರ್ಯ ಕೖಗೊಂಡು ಬಡವರಿಗೆ ಸೖಟ್ ಹಂಚಿಕೆ ಕಾರ್ಯಕ್ಕೆ ಮುಂದಾಗದಿದ್ದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

 ಕಂದಾಯ ಪರಿವೀಕ್ಷ ಅನಿಲ್ ಮಾತನಾಡಿ, ಕೆಲಸ ನಿರ್ವಹಿಸಲು ಕಾಲಾವಕಾಶ ಕೋರಿದರು. ಈ ಸಂದರ್ಭ ಪೈಸಾರಿ ಜಾಗದ ಮಾಹಿತಿ ನೀಡಿದರೆ ಒತ್ತುವರಿದಾರರಿಂದ ಹಣಪಡೆದು ಅವರಿಗೆ ಅಜಾಗವನ್ನು ಮಂಜೂರು ಮಾಡಿಕೊಡುವುದಾಗಿ ಆರೋಪಿಸಿ ಅವರನ್ನು ತೀರ್ವವಾಗಿ ತರಾಟೆಗೆ ತೆಗೆದುಕೊಂಡರು.

 ಸ್ಥಳಕ್ಕಾಗಮಿಸಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಮೋದ್ ಮಾಲ್ದಾರೆ ಗ್ರಾಮದಲ್ಲಿ ಸುಮಾರು 500ಜನ ನಿವೇಶನ ರಹಿತರು ಈಗಾಗಲೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಪೖಸಾರಿ ಜಾಗವನ್ನು ಶೀಘ್ರದಲ್ಲಿ ಇವರ ನೀಡುವ ಭರವಸೆ ನೀಡಿದರು.

 ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷ ಎ. ಸಿ. ಸಾಬು, ಕಾರ್ಮಿಕ ಮುಖಂಡ ಎನ್, ಡಿ, ಕುಟ್ಟಪ್ಪನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್. ಬಿ. ರಮೇಶ್ ಮುಖಂಡರಾದ ರಾಚಪ್ಪಾಜಿ, ನಾಣಯ್ಯ, ಲವ, ಚಿದಂಬರಂ ವಿನೋದ್, ಆರ್. ಕೆ. ರಮೇಶ್, ಶಿವ, ಉಷ, ರಾಣಿ,ಹಾಜರಿದ್ದರು.

What's Your Reaction?

Like Like 0
Dislike Dislike 1
Love Love 2
Funny Funny 0
Angry Angry 0
Sad Sad 0
Wow Wow 1