ವಿರಾಜಪೇಟೆ ಪದವಿ ಕಾಲೇಜಿನಲ್ಲಿ ರಕ್ಷಬಂಧನ ಆಚರಣೆ

ವಿರಾಜಪೇಟೆ ಪದವಿ ಕಾಲೇಜಿನಲ್ಲಿ ರಕ್ಷಬಂಧನ ಆಚರಣೆ

ವಿರಾಜಪೇಟೆ:ರಕ್ಷಾಬಂಧನದ ದಿನ ಸಹೋದರಿ ತನ್ನ ಸಹೋದರನ ಕೈಗೆ ರಕ್ಷೆಯನ್ನು ಕಟ್ಟಿ ದೀರ್ಘಾಯುಷ್ಯಕ ಹಾಗೂ ಯಶಸ್ಸನ್ನು ಹರಸಿದರೆ. ಸಹೋದರ ನನ್ನ ಸಹೋದರಿಯನ್ನು ಎಲ್ಲಾ ರೀತಿಯ ಕಷ್ಟಗಳಿಂದ ರಕ್ಷಿಸುವ ಭರವಸೆಯನ್ನು ನೀಡುವ ಹಬ್ಬ ರಕ್ಷಾಬಂಧನ ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಆಶಯ ವ್ಯಕ್ತಪಡಿಸಿದರು .

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಶನಿವಾರ ಆಚರಿಸಲಾದ ರಕ್ಷಾ ಬಂಧನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕ್ರತಿಯಲ್ಲಿ ಆಚರಿಸುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ರಕ್ಷಾಬಂಧನ ಪ್ರಮುಖ ಸ್ಥಾನವನ್ನು ಪಡೆದಿದೆ. ಸಹೋದರ ಸಹೋದರಿಯರ ನಡುವೆ ಬಾಂಧವ್ಯದ ಪ್ರತೀಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರೀತಿ , ವಿಶ್ವಾಸ , ಸಹೋದರತೆ, ಬ್ರಾಂತತ್ವ , ರಕ್ಷಣೆ ಮುಂತಾದವುಗಳನ್ನು ಬೆಳೆಸಿಕೊಳ್ಳುವಂತೆ ಈ ಹಬ್ಬವು ಕರೆ ನೀಡುತ್ತದೆ .ರಕ್ಷಾ ಬಂಧನ ಜಾತಿ, ಧರ್ಮ, ಭೇದಭಾವವನ್ನು ತೊಡೆದು ಹಾಕಿ ಎಲ್ಲರನ್ನು ಒಂದಾಗಿಸಿ ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು . ಕಾಲೇಜಿನ ಉಪನ್ಯಾಸಕಿಯಾದ ಬಿ.ಯು .ಅಂಬಿಕಾ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಭ್ರಾತೃತ್ವ ಬೆಳೆಸುವ ಶ್ರೇಷ್ಠ ಹಬ್ಬ ಇದಾಗಿದ್ದು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ .

ಹಬ್ಬದ ಮಹತ್ವದ ಕುರಿತಾ ಉಲ್ಲೇಖಗಳು ಪುರಾಣ ಹಾಗೂ ಇತಿಹಾಸದ ಪುಟಗಳಲ್ಲಿ ಕಾಣಸಿಗುತ್ತದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನ ಕೈಗೆ ಗಾಯವಾದಂತಹ ಸಂದರ್ಭ ದ್ರೌಪದಿಯು ತನ್ನ ಸೀರೆಯ ಸೆರಗನ್ನು ಹರಿದು ಕಟ್ಟಿದಳು. ಮುಂದೆ ಕೌರವರಿಂದ ದ್ರೌಪದಿಗೆ ಅಪಮಾನವಾಗುವ ಸಂದರ್ಭ ಕೃಷ್ಣನು ಅಕ್ಷಯ ಸೀರೆಯನ್ನು ಇಟ್ಟು ಆಕೆಯನ್ನು ಕಾಪಾಡಿದ. ಅದೇ ರೀತಿ ಇತಿಹಾಸದಲ್ಲಿ ಜಗತ್ತನ್ನೇ ಗೆಲ್ಲುತ್ತ ಬಂದ ಅಲೆಕ್ಸಾಂಡರ್ ಭಾರತೀಯ ಪಂಜಾಬಿನ ರಾಜನಾದ ಪುರುಷೋತ್ತಮ (ಪೊರಸ್ ) ನಿಂದ ಯುದ್ಧದಲ್ಲಿ ಸೋತು ಸೆರೆಯಾದಗ ಅಲೆಕ್ಸಾಂಡರ್ ನನ್ನು ಕೊಲ್ಲದೆ ಆತನನ್ನು ರಕ್ಷಿಸುವಂತೆ ಅಲೆಕ್ಸಾಂಡರ್ ನ ಹೆಂಡತಿ ಪುರುಷೋತ್ತಮ ನಿಗೆ ರಕ್ಷೆಯನ್ನು ಕಟ್ಟಿ ತನ್ನ ಗಂಡನನ್ನು ಉಳಿಸಿಕೊಂಡ ಘಟನೆಗಳನ್ನು ನಾವಿಲ್ಲಿ ನೆನೆಯಬಹುದೆಂದರು .

ಎಲ್ಲ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿದರುಈ ಸಂದರ್ಭ ಕಾಲೇಜಿನ ಆಯ್ಕೆ ಸಂಚಾಲಕಿ ಪ್ರಿಯ ಮುದ್ದಪ್ಪ ಕಾಲೇಜಿನ ಉಪನ್ಯಾಸಕ ವರ್ಗ ಆಡಳಿತಾತ್ಮಕ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು .